ರಾಮನಗರ:ಕಾಂಗ್ರೆಸ್ನ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರು ಜೈಲು ಸೇರಿದ್ದರಿಂದ ಬೇಸತ್ತು ಅವರ ಅಭಿಮಾನಿಯೊಬ್ಬ ಮದ್ಯಕ್ಕೆ ವಿಷ ಬೆರೆಸಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಕನನಕಪುರದಲ್ಲಿ ವಿಷ ಕುಡಿದು ಸಾವಿಗೆ ಶರಣಾದ ಡಿಕೆಶಿ ಅಭಿಮಾನಿ - ಕನಕಪುರ ತಾಲೂಕಿನ ದೊಡ್ಡಕೊಪ್ಪ ಗ್ರಾಮ
ಕನಕಪುರ ತಾಲೂಕಿನ ದೊಡ್ಡಕೊಪ್ಪ ಗ್ರಾಮದಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅಭಿಮಾನಿ ಎಂದು ತಿಳಿದು ಬಂದಿದೆ.
ಕನಕಪುರ ತಾಲೂಕಿನ ದೊಡ್ಡಕೊಪ್ಪ ಗ್ರಾಮದ ನಿವಾಸಿ ಮಹದೇವ (43) ಎಂಬಾತನೇ ಸಾವಿಗೆ ಶರಣಾದ ವ್ಯಕ್ತಿ. ಡಿ.ಕೆ. ಶಿವಕುಮಾರ್ ಜೈಲು ಸೇರಿದ ದಿನದಿಂದಲೂ ಈತ ತೀವ್ರವಾಗಿ ತಲೆಕೆಡಿಸಿಕೊಂಡು ಕುಡಿತದ ದಾಸನಾಗಿ ಕೊನೆಗೆ ವಿಷ ಸೇವನೆ ಮಾಡಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಡಿಕೆಶಿಯನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡೆದ ದಿನದಿಂದಲೂ ಈತ, "ನಾನು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಿಡುಗಡೆ ಮಾಡಿಸುತ್ತೇನೆ ಅವರು ಬಂದೇ ಬರ್ತಾರೆ ನಾನು ಕರ್ಕೊಂಡು ಬರ್ತೀನಿ" ಎಂದು ಕೂಗಾಡುತ್ತಲೇ ಇದ್ದ. ವಿಷ ಕುಡಿದ ಮತ್ತಿನಲ್ಲಿಯೂ ಡಿಕೆಶಿ ಬಿಡುಗಡೆಯಾಗಿಯೇ ಆಗುತ್ತಾರೆ ಎಂದು ಮಹದೇವ ಹೇಳುತ್ತಿದ್ದ, ಆತನ ಸ್ಥಿತಿ ಕಂಡು ರಾತ್ರಿಯೇ ಕ್ಲಿನಿಕ್ಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಹೋಗುವಷ್ಟರಲ್ಲಿ ಮಹದೇವ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು ಎಂದು ತಿಳಿದು ಬಂದಿದೆ.