ಕರ್ನಾಟಕ

karnataka

ETV Bharat / state

ಜೆಡಿಎಸ್ ಸಮಯ ಸಾಧಕ‌ ಪಕ್ಷ: ಎಂಎಲ್​​ಸಿ ಸಿ.ಎಂ ಲಿಂಗಪ್ಪ ಕಿಡಿ - ರಾಮನಗರದಲ್ಲಿ ಕನಕದಾಸ ಜಯಂತಿ ಆಚರಣೆ ಸುದ್ದಿ

ಜೆಡಿಎಸ್ ವಿರುದ್ಧ ಕಾಂಗ್ರೆಸ್ ಎಂಎಲ್​​ಸಿ ಸಿ.ಎಂ ಲಿಂಗಪ್ಪ ಕಿಡಿ. ಬಿಎಸ್​ವೈ ಮೂರು ವರ್ಷ ಆಡಳಿತ ನಡೆಸಲಿ ಎಂದು ಹಾರೈಕೆ.

ಎಂಎಲ್​​ಸಿ ಸಿ.ಎಂ ಲಿಂಗಪ್ಪ ವಾಗ್ದಾಳಿ

By

Published : Nov 15, 2019, 8:58 PM IST

ರಾಮನಗರ:ಜೆಡಿಎಸ್ ಪಕ್ಷ ಸಮಯ ಸಾಧಕ‌ ಪಕ್ಷ, ಅಧಿಕಾರ ಎಲ್ಲಿ ಸಿಗುತ್ತೋ ಆ ಕಡೆ ಹೋಗುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ವಾಗ್ದಾಳಿ ನಡೆಸಿದ್ದಾರೆ.

ನಗರದ ಅಂಬೇಡ್ಕರ್ ಭವನದಲ್ಲಿ ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಂಎಲ್​​ಸಿ ಸಿ.ಎಂ.ಲಿಂಗಪ್ಪ ಅವರು ಕನಕದಾಸರ ಹಾಡು ಹಾಡಿ ರಂಜಿಸಿದರು. ನಂತರ ಜೆಡಿಎಸ್ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಜೆಡಿಎಸ್​​​ಗೆ ಅಧಿಕಾರದ ಚಪಲತೆ ಹೆಚ್ಚು. ಜೆಡಿಎಸ್ ಪಕ್ಷದವರ ಸಹವಾಸವೇ ಬೇಡ, ಕಾಂಗ್ರೆಸ್ ನವರು ವಿರೋಧ ಪಕ್ಷದಲ್ಲೇ ಇರುತ್ತೇವೆ ಎಂದು ತಿಳಿಸಿದರು.

ಎಂಎಲ್​​ಸಿ ಸಿ.ಎಂ ಲಿಂಗಪ್ಪ ವಾಗ್ದಾಳಿ

ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ, ಯಡಿಯೂರಪ್ಪ ಮೂರು ವರ್ಷ ಸಿಎಂ ಆಗಿರಲಿ, ಅಭಿವೃದ್ಧಿ ಕೆಲಸ ಮಾಡಲಿ ಎಂದು ಲಿಂಗಪ್ಪ ಹಾರೈಸಿದ್ರು. ಇಂದಿನ‌ ಸರ್ಕಾರಿ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ್​ ನಾರಾಯಣ್ ಗೈರಾಗಿದ್ದರು. ಖಾಲಿ ಚೇರ್​​​​ಗಳಿಗೆ ಎಂಎಲ್​​ಸಿ ಸಿಎಂ ಲಿಂಗಪ್ಪ ಹಾಗೂ ಗಣ್ಯರು ಭಾಷಣ ಮಾಡುವಂತಾಯ್ತು.

For All Latest Updates

ABOUT THE AUTHOR

...view details