ರಮೇಶ್ ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್ ಮುಖಂಡರ ಖಂಡನೆ - ವಿಧಾನ ಪರಿಷತ್ ಸದಸ್ಯ ರವಿ ಸುದ್ದಿಗೋಷ್ಟಿ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡರು ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಮುಖಂಡರ ಖಂಡನೆ
ರಾಮನಗರ:ಈ ಕ್ಷೇತ್ರದ ಮಹಿಳೆಯರು ಸ್ವಾಭಿಮಾನಿಗಳು ಜಾರಕಿಹೊಳಿ ಕ್ಷೇತ್ರಕ್ಕೆ ಬಂದ್ರೆ ಇಲ್ಲಿನ ಮಹಿಳೆಯರು ಪೊರಕೆಯಿಂದ ಸ್ವಾಗತ ಮಾಡುತ್ತಾರೆ ಅಂತಾ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ರೋಹಿಣಿ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ರವಿ ಮಾತನಾಡಿ, ನೀರಾವರಿ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಇದೆ, ಇಲಾಖೆ ಕೆಲಸ ಮಾಡು ಅಂದರೆ ಲಜ್ಜೆಗೆಟ್ಟ ಕೆಲಸ ಮಾಡಿ ಮಾನ ಮಾರ್ಯದೆ ಇಲ್ಲದೇ ಜಾರಕಿಹೊಳಿ ತಾನು ಮಾಡಿದ ಕೆಲಸವನ್ನ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ರು. ಸಿಡಿಯಲ್ಲಿ ಇರುವವರನ್ನು ಜಾರಕಿಹೊಳಿ ನಾನಲ್ಲ ಅಂದ ಮೇಲೆ ಸಿಡಿಯಲ್ಲಿ ಇರುವ ಆ ಜಾರಕಿಹೊಳಿ ಯಾರು ಎಂದು ಪ್ರಶ್ನಿಸಿದ್ರು.
ಎಸ್ಐಟಿ ಅಧಿಕಾರಿಗಳು ನಕಲಿ ಸಿಡಿ ಬಗ್ಗೆ ತನಿಖೆ ಮಾಡುತ್ತಿದ್ದಾರೊ ಇಲ್ಲಾ ಸಿಡಿ ಹೊರ ತಂದವರು ಯಾರು ಅಂತಾ ತನಿಖೆ ನಡೆಸುತ್ತಿದ್ದಾರಾ ಗೊತ್ತಿಲ್ಲಾ ಎಂದ್ರು. ನಿನ್ನೆ ತಮ್ಮ ದುರಹಂಕಾರದಲ್ಲಿ ಜಾರಕಿಹೊಳಿ ನಮ್ಮ ನಾಯಕರ ವಿರುದ್ಧ ಮಾತನಾಡಿದ್ದಾರೆ. ಜಾರಕಿಹೊಳಿ ಕನಕಪುರದಲ್ಲಿ ಡಿಕೆಶಿ ಅವರನ್ನ ಸೋಲಿಸುತ್ತೇನೆ ಎಂದು ಹೇಳಿದ್ದಾರೆ, ಅವರಿಗೆ ತಾಕತ್
ಇದ್ದರೆ ಕನಕಪುರಕ್ಕೆ ಬಂದು ಸ್ಪರ್ಧೆ ಮಾಡಲಿ ಎಂದು ಇದೇ ವೇಳೆ, ಎಸ್.ರವಿ ಸವಾಲು ಹಾಕಿದ್ರು.