ರಾಮನಗರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಇಡಿ ಅಧಿಕಾರಿಗಳು ಮಾನವ ಹಕ್ಕು ಉಲ್ಲಂಘಿಸಿದ್ದಾರೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಲಿಂಗಪ್ಪ ದೂರು ಸಲ್ಲಿಸಿದ್ದಾರೆ.
ಡಿಕೆಶಿ ನ್ಯಾಯಾಂಗ ಬಂಧನ ವಿಚಾರ; ಇಡಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು - ಇಡಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ಇಡಿ ಅಧಿಕಾರಿಗಳು ಮಾನವ ಹಕ್ಕು ಉಲ್ಲಂಘಿಸಿದ್ದಾರೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಲಿಂಗಪ್ಪ ದೂರು ಸಲ್ಲಿಸಿದ್ದಾರೆ.
![ಡಿಕೆಶಿ ನ್ಯಾಯಾಂಗ ಬಂಧನ ವಿಚಾರ; ಇಡಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು](https://etvbharatimages.akamaized.net/etvbharat/prod-images/768-512-4580956-thumbnail-3x2-rmn.jpg)
ಮಾಜಿ ಸಚಿವ ಡಿ.ಕೆ.ಶಿವಕುಮಾರ್
ಇಡಿ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿ.ಎಂ.ಲಿಂಗಪ್ಪ, ಡಿಕೆಶಿ ಅವರಿಗೆ ತಲೆದಿಂಬು ಕೊಟ್ಟಿಲ್ಲ. ಅವರು ವಿಚಾರಣಾಧೀನ ಕೈದಿ ಅಲ್ಲ. ಕೇವಲ ಆಪಾದಿತರು ಅಷ್ಟೇ. ಜೈಲಿನಲ್ಲಿ ಅವರಿಗೆ ಹಾಸಿಗೆಯಿಲ್ಲ, ಅವರನ್ನು ಅಧಿಕಾರಗಳು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಮಾನವ ಆಯೋಗಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಡಿಕೆಶಿ ಪ್ರಕರಣದ ತನಿಖಾಧಿಕಾರಿ ಮೋನಿಕಾ ಶರ್ಮಾ ಸೇರಿದಂತೆ 5 ಜನರ ವಿರುದ್ಧ ದೂರು ನೀಡಿದ್ದೇನೆ. ಶಿವಕುಮಾರ್ಗೆ ನ್ಯಾಯ ಸಿಗಬೇಕು. ಹಾಗಾಗಿ ದೂರು ಕೊಟ್ಟಿದ್ದೇನೆ ಎಂದರು.