ಕರ್ನಾಟಕ

karnataka

ETV Bharat / state

ಮಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡಿದ ಸಿಎಂ: ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಭರವಸೆ - ಭಕ್ಷಿ ಕೆರೆ

ಸಿಎಂ ಬೊಮ್ಮಾಯಿ ರಾಮನಗರಕ್ಕೆ ಭೇಟಿ ನೀಡಿ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದರು. ಅಲ್ಲದೇ ಭಕ್ಷಿ ಕೆರೆ ದುರಸ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

CM observed the rain damaged areas
ಸಿಎಂ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ

By

Published : Aug 29, 2022, 5:25 PM IST

ರಾಮನಗರ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ರಾಮನಗರ ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ, ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.

ರಾಮನಗರ ಮಾರುತಿ ಬಡಾವಣೆಯಲ್ಲಿ ಭಕ್ಷಿ ಕೆರೆ ಒಡೆದು ಅಪಾರ ಪ್ರಮಾಣದ ಬೆಳೆಗೆ ಹಾನಿಯಾಗಿರುವುದನ್ನು ಸಿಎಂ ಪರಿಶೀಲಿಸಿದರು. ಅಷ್ಟೇ ಅಲ್ಲದೇ ರೈತರ ಮನೆಗೆ ಭೇಟಿ ಕೊಟ್ಟು, ಪರಿಹಾರ ನೀಡುವ ಭರವಸೆ ನೀಡಿದರು.

ಬಿದ್ದಿರುವ ಮನೆಗಳಿಗೆ ತಕ್ಷಣ 1 ಲಕ್ಷ ರೂಪಾಯಿ ಹಾಗೂ ಒಟ್ಟಾರೆ 5 ಲಕ್ಷ ರೂ. ಪರಿಹಾರವನ್ನು ಹಂತ ಹಂತವಾಗಿ ನೀಡಲಾಗುವುದು. ಭಕ್ಷಿ ಕೆರೆಯನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಭಕ್ಷಿ ಹಾಗೂ ಕ್ಷೇತ್ರಹಳ್ಳಿ ಕೆರೆಗಳು ಒಡೆದು ಹುಣಸನಹಳ್ಳಿ ರಸ್ತೆಯಲ್ಲಿ ತೀವ್ರವಾಗಿ ಹಾನಿಗೊಳಗಾಗಿರುವ ನೂರಾರು ಮನೆಗಳ ಸಂತ್ರಸ್ತರನ್ನು ಭೇಟಿಯಾಗಿ, ಸಾಂತ್ವನ ಹೇಳಿದರು. ಕೂಡಲೇ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೀರು ನುಗ್ಗಿದ ಪರಿಣಾಮ ರೇಷ್ಮೆ ನೂಲು ತೆಗೆಯುವ ಘಟಕಗಳಿಗೆ ಹಾನಿಯಾಗಿದ್ದು, ಅಲ್ಲಿಗೂ ಭೇಟಿ ನೀಡಿ ಹಾನಿಯಾಗಿರುವ ಯಂತ್ರಗಳನ್ನು ಸಿಎಂ ಪರಿಶೀಲಿದರು.

ಇದನ್ನೂ ಓದಿ: ರಾಮನಗರ ಮಳೆಹಾನಿ ವೀಕ್ಷಣೆಗೆ ಸಿಎಂ ಆಗಮನ.. ಬೊಮ್ಮಾಯಿಗೆ ಕಾಯುತ್ತಿರುವ ಹೆಚ್‌ಡಿಕೆ

ABOUT THE AUTHOR

...view details