ರಾಮನಗರ :ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.
ಚುನಾವಣಾ ನೀತಿ ಸಂಹಿತೆ... ರಾಮನಗರದಲ್ಲಿ ಜಾಹೀರಾತು ಫಲಕಗಳ ತೆರವು ಕಾರ್ಯ ಆರಂಭ - Clearance of the advertising panels
ಲೋಕಸಭೆ ಚುನಾವಣೆ ಘೋಷಣೆಯಾದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಹೀಗಾಗಿ ರಾಮನಗರದಲ್ಲಿ ಜಾಹೀರಾತು ಫಲಕಗಳ ತೆರವು ಕಾರ್ಯ ಆರಂಭವಾಗಿದೆ.
![ಚುನಾವಣಾ ನೀತಿ ಸಂಹಿತೆ... ರಾಮನಗರದಲ್ಲಿ ಜಾಹೀರಾತು ಫಲಕಗಳ ತೆರವು ಕಾರ್ಯ ಆರಂಭ](https://etvbharatimages.akamaized.net/etvbharat/images/768-512-2660424-1109-83a8532f-262a-494c-a508-c3957473b9c0.jpg)
ಜಾಹೀರಾತು ಫಲಕಗಳು
ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲೂಕುಗಳಲ್ಲಿ ಹಾಕಲಾಗಿರುವ ಇಲಾಖೆಯ ಜಾಹೀರಾತು ಫಲಕ ತೆರವುಗೊಳಿಸಲಾಗುತ್ತಿದ್ದು, ಚುನಾವಣಾ ನೀತಿ ಸಂಹಿತೆ ಮುಗಿಯುವರೆಗೂ ಯಾವುದೇ ಜಾಹೀರಾತು ಫಲಕಗಳನ್ನು ಹಾಕುವಂತಿಲ್ಲ.
ಕೂಡಲೇ ಖಾಸಗೀಯವರು ಕೂಡ ಜಾಹೀರಾತು ಫಲಕಗಳನ್ನು ತೆಗೆದು ಹಾಕುವಂತೆ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಂಕರಪ್ಪ ಸೂಚಿಸಿದ್ದಾರೆ.