ಕರ್ನಾಟಕ

karnataka

ETV Bharat / state

ಬಾಕಿ ಸಂಬಳ ನೀಡುವಂತೆ ಆಗ್ರಹಿಸಿ ಮೈಮೇಲೆ ಮಲ ಸುರಿದುಕೊಂಡು ಪೌರಕಾರ್ಮಿಕರ ಪ್ರತಿಭಟನೆ - ಪೌರ ಕಾರ್ಮಿಕರು

ಬಾಕಿ ಉಳಿಸಿಕೊಂಡಿರುವ ಸಂಬಳ ಕೊಡುವಂತೆ ಒತ್ತಾಯಿಸಿ ಇಬ್ಬರು ಪೌರಕಾರ್ಮಿಕರು ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ.

civic-workers-protested-by-pouring-faeces-on-body-for-demanding-payment-of-salary
ಬಾಕಿ ಸಂಬಳ ನೀಡುವಂತೆ ಮೈ ಮೇಲೆ ಮಲ ಸುರಿದುಕೊಂಡು ಪೌರಕಾರ್ಮಿಕರ ಪ್ರತಿಭಟನೆ

By ETV Bharat Karnataka Team

Published : Aug 22, 2023, 11:01 PM IST

ರಾಮನಗರ :ಸಂಬಳ ಕೊಡದ ಹಿನ್ನಲೆ ಇಬ್ಬರು ಪೌರ ಕಾರ್ಮಿಕರು ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿರುವ ಘಟನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಇಂದು ನಡೆದಿದೆ. ಕನಕಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಪಂಚಾಯತ್ ಕಚೇರಿಯ ಮುಂಭಾಗ ಇಬ್ಬರು ಪೌರ ಕಾರ್ಮಿಕರು ಸಂಬಳ ನೀಡುವಂತೆ ಒತ್ತಾಯಿಸಿ ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿದರು.

ಕಲ್ಲಹಳ್ಳಿ ಪಂಚಾಯಿತಿಯು ಕೆಲವು ತಿಂಗಳುಗಳ ಸಂಬಳ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ಇಬ್ಬರು ಪೌರ ಕಾರ್ಮಿಕರು ಪಂಚಾಯತ್​ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇದರಿಂದ ಎಚ್ಚೆತ್ತ ಪಂಚಾಯತ್​ ಆಡಳಿತ ಬಾಕಿ ಸಂಬಳ 3.20 ಲಕ್ಷ ರೂಪಾಯಿಯನ್ನು ಪಾವತಿ ಮಾಡಿದೆ. ಬಳಿಕ ಇಬ್ಬರು ಪೌರಕಾರ್ಮಿಕರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಈ ಇಬ್ಬರು ಕಲ್ಲಹಳ್ಳಿ ಗ್ರಾಮ ಪಂಚಾಯತ್​ನಲ್ಲಿ ಕಳೆದ ಒಂದು ವರ್ಷದಿಂದ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಇವರಿಗೆ ಕಳೆದ ಕೆಲವು ತಿಂಗಳುಗಳಿಂದ ವೇತನವನ್ನು ನೀಡಿಲ್ಲ. ಇಲ್ಲಿನ ಪಂಚಾಯತ್​ ಅಭಿವೃದ್ಧಿ ಅಧಿಕಾರಿ ವೇತನ ನೀಡಲು ಸತಾಯಿಸುತ್ತಿದ್ದಾರೆ. ಇದರಿಂದಾಗಿ ಜೀವನ ನಿರ್ವಹಣೆಗೂ ತೊಂದರೆಯಾಗಿದೆ. ಈ ಸಂಬಂಧ ತಾಲೂಕು ಪಂಚಾಯತ್​ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಂಬಳ ನೀಡಿಲ್ಲ ಎಂದು ಪೌರಕಾರ್ಮಿಕರು ಆರೋಪಿಸಿದ್ದಾರೆ.

ಇದನ್ನೂ ಓದಿ :ಸಂಬಳ ಸಿಗದ ಆಕ್ರೋಶ; ತುಮಕೂರು ನಗರದ 4 ಇಂದಿರಾ ಕ್ಯಾಂಟಿನ್ ಸೇವೆ ಸ್ಥಗಿತ

ABOUT THE AUTHOR

...view details