ರಾಮನಗರ:ಕೆರೆ ಅಂಚಿನಲ್ಲಿ ಬೆಳೆದಿದ್ದ ಗಿಡಗಳನ್ನು ಕತ್ತರಿಸಿ ಸ್ಚಚ್ಛಗೊಳಿಸುವ ಮೂಲಕ ಡಿವೈಎಸ್‌ಪಿ ರಮೇಶ್ ತಂಡ ಮಾದರಿ ಕೆಲಸ ಮಾಡಿದೆ. ಕೆಲವು ತಿಂಗಳಿನಿಂದ ಗಿಡಗಳು ರಸ್ತೆ ಮೇಲೆ ಬಂದಿತ್ತಲ್ಲದೆ, ಪಾದಚಾರಿಗಳಿಗೆ ಸಮಸ್ಯೆಯಾಗಿತ್ತು. ಜೊತೆಗೆ ನಗರ ಸೌಂದರ್ಯಕ್ಕೂ ಕುಂದು ತಂದಿತ್ತು.
ಇದನ್ನು ಗಮನಿಸಿದ ಚನ್ನಪಟ್ಟಣ ಡಿವೈಎಸ್‌ಪಿ ರಮೇಶ್ ಈ ಕಸ ತೆರವುಗೊಳಿಸಲು ಮುಂದಾಗಿದ್ದರು. ಇದಕ್ಕಾಗಿ ವಾಟ್ಸಾಪ್ನಲ್ಲಿ ಗ್ರೂಪ್ ಮಾಡಿಕೊಂಡು ಕೆಲ ದಿನಗಳಿಂದ ಚರ್ಚೆ ನಡೆಸಲಾಗಿತ್ತು.
ಕೆರೆ ದಡದಲ್ಲಿದ್ದ ಕಸ ತೆರವುಗೊಳಿಸುತ್ತಿರುವ ರಾಮನಗರ ಡಿವೈಎಸ್‌ಪಿ ತಂಡ ಈ ಹಿನ್ನೆಲೆಯಲ್ಲಿ ಕೈಜೋಡಿಸಿದ 35ಕ್ಕೂ ಹೆಚ್ಚು ಮಂದಿ ಕುಡಿನೀರು ಕಟ್ಟೆಯಲ್ಲಿ ಬೆಳೆದಿದ್ದ ರಾಶಿ ರಾಶಿ ಕಸವನ್ನು ತೆರವು ಮಾಡಿದ್ದಾರೆ. ಈ ತಂಡ ಬೆಳಗ್ಗೆಯಿಂದ ಸಂಜೆವರೆಗೂ ಕಸ ತೆರವು ಕಾರ್ಯದಲ್ಲಿ ನಿರತವಾಗಿತ್ತು.
ಕೊರೊನಾಗಿಂತಲೂ ಮೊದಲು ಈ ಕೆರೆಯ ಬಳಿ ವಾಯುವಿಹಾರಕ್ಕೆಂದು ನೂರಾರು ಮಂದಿ ಬರುತ್ತಿದ್ದರು. ಆದರೆ ಕೊರೊನಾ ಬಳಿಕ ಜನರ ಓಡಾಟವಿಲ್ಲದೆ, ಗಿಡಗಳು ಬೆಳೆದಿದ್ದವು. ಜನರ ಓಡಾಟಕ್ಕೂ ಅಡ್ಡಿಯಾಗಿತ್ತು.
ಇದನ್ನೂ ಓದಿ:'ಲೋಕಾಯುಕ್ತ ಮರುಸ್ಥಾಪಿಸಿ, ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ'