ಕರ್ನಾಟಕ

karnataka

ETV Bharat / state

ಮೈ ಮೇಲೆ ಬಿದ್ದ ಕೆಮಿಕಲ್​​: ಚಿಕಿತ್ಸೆ ಫಲಿಸದೆ ಕಾರ್ಮಿಕ ಸಾವು - ರಾಮನಗರ ಹಾಲಿನ ಡೈರಿ ಸುದ್ದಿ

ನೂತನ‌ ಮೆಗಾ ಹಾಲಿನ ಡೈರಿಯಲ್ಲಿ ಕಾರ್ಮಿಕನ‌ ಮೇಲೆ ಕೆಮಿಕಲ್ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ‌ ಇಲ್ಲಿನ ನಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

Chemical that fell on the worker
ಕಾರ್ಮಿಕನ ಮೇಲೆ ಬಿದ್ದ ಕೆಮಿಕಲ್

By

Published : Jan 10, 2020, 6:15 PM IST

ರಾಮನಗರ: ನೂತನ‌ ಮೆಗಾ ಹಾಲಿನ ಡೈರಿಯಲ್ಲಿ ಕಾರ್ಮಿಕನ‌ ಮೇಲೆ ಕೆಮಿಕಲ್ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ‌ ಇಲ್ಲಿನ ನಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೋಹನ್ ಮೃತಪಟ್ಟ ದುರ್ದೈವಿ. ಕನಕಪುರ ತಾಲೂಕಿನ ಶಿವನಹಳ್ಳಿ ಗ್ರಾಮದ ನೂತನ ಹಾಲಿನ ಡೈರಿಯಲ್ಲಿ ಜನವರಿ 5ರಂದು ಬಾಯ್ಲರ್ ಕ್ಲೀನ್ ಮಾಡುವಾಗ ಮೈ ಮೇಲೆ ಕೆಮಿಕಲ್ ಬಿದ್ದು ನೌಕರ ಮೋಹನ್ ಗಂಭೀರವಾಗಿ ಗಾಯಗೊಂಡಿದ್ದ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಡೈರಿಯಲ್ಲಿ ಸೂಕ್ತ ಭದ್ರತೆ ಇಲ್ಲದ ಕಾರಣ ಘಟನೆ ನಡೆದಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಘಟನೆಯಿಂದ ನೊಂದ ಕಾರ್ಮಿಕರು ಡೈರಿ ಮುಂಭಾಗ ಮೌನ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details