ರಾಮನಗರ:ಮಾಗಡಿ ತಾಲೂಕಿನ ಕಲ್ಲುಪಾಳ್ಯ ಗ್ರಾಮದಲ್ಲಿಮಹಿಳೆಯ ಬಲಿ (Woman killed by Cheetah) ಪಡೆದಿದ್ದ ನರಭಕ್ಷಕ ಚಿರತೆ ಕೊನೆಗೂ ಸೆರೆಯಾಗಿದೆ. ಕಲ್ಲುಪಾಳ್ಯ ಸುತ್ತಮುತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಹಸು ಮೇಯಿಸಲು ಹೋಗುತ್ತಿದ್ದ ಮಹಾಲಕ್ಷ್ಮಮ್ಮ ಎಂಬಾಕೆಯ ಮೇಲೆ ಕಳೆದ ತಿಂಗಳು ದಾಳಿ ನಡೆಸಿದ್ದ ಚಿರತೆ ಆಕೆಯನ್ನ ತಿಂದುಹಾಕಿತ್ತು. ಬಳಿಕ ಅರಣ್ಯಾಧಿಕಾರಿಗಳು (Forest Department) ಚಿರತೆ ಸೆರೆಗಾಗಿ ಕಾರ್ಯಾಚರಣೆ ಆರಂಭಿಸಿ ವಿವಿಧಡೆ 8 ಬೋನ್ ಇರಿಸಿತ್ತು.