ರಾಮನಗರಹೊತ್ತಲ್ಲದ ಹೊತ್ತಲ್ಲಿ ಕಾಲ್ ಮಾಡಿ ನೀವು ಅದೃಷ್ಟವಂತರು, ನೀವು ಸಾವಿರಾರು ರೂಪಾಯಿ ಬೆಲೆಬಾಳುವ ಮೊಬೈಲ್‌ನ್ನ ಉಡುಗೊರೆಯಾಗಿ ಗೆದ್ದಿದ್ದೀರಾ ಎಂದು ಮೋಸ ಮಾಡಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
ಸುಂದರ ಧ್ವನಿಯಲ್ಲಿ ಕರೆಮಾಡುವ ಮಹಿಳೆಯೊಬ್ಬಳು, ಇಂತಿಷ್ಟು ಹಣವನ್ನ ಮುಂಗಡವಾಗಿ ಕಟ್ಟಿ, ನಂತರ ನಿಮ್ಮ ಬಹುಮಾನವನ್ನ ಪಡೆದುಕೊಳ್ಳಿ ಅಂತಾಳೆ. ಇದಕ್ಕೆ ಮಾರುಹೋಗುವ ಜನರು ಆಕೆ ಕೇಳಿದ ಹಣ ನೀಡಿ ಮೋಸ ಹೋಗುತ್ತಿದ್ದರು. ಈ ಹಿನ್ನೆಲೆ ಈ ಖತರ್ನಾಕ್ ಕೆಲಸ ಮಾಡುತ್ತಿದ್ದ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಐವಾರ ಗ್ರಾಮದವನಾದ ಸತೀಶ ಎಂಬಾತ ಟೆಲಿ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಈತನ ಮೂಲ ಉದ್ದೇಶವೇ ಅಮಾಯಕರಿಗೆ ದೋಖಾ ಮಾಡೋದು. ಈತನದ್ದೇ ಒಂದು ತಂಡವನ್ನ ಕಟ್ಟಿಕೊಂಡು ಕಾಲ್‌ಸೆಂಟರ್ ಮೂಲಕ ಅನಾಮಿಕರಿಗೆ ಹುಡುಗಿಯರಿಂದ ದೂರವಾಣಿ ಕರೆ ಮಾಡಿಸೋದು. ನಂತರ ನಿಮಗೆ 11 ಸಾವಿರ ಬೆಲೆಬಾಳುವ ಸ್ಯಾಮ್‌ಸಂಗ್ ಮೊಬೈಲ್‌ನ ಗಿಫ್ಟ್ ಆಗಿ ಕೊಡುತ್ತೇವೆ. ಇದಕ್ಕಾಗಿ ನೀವು ಮುಂಗಡವಾಗಿ ನಮಗೆ 1650 ರೂಪಾಯಿ ಹಣವನ್ನ ಅಕೌಂಟ್‌ಗೆ ಹಾಕಬೇಕೆಂದು ಪ್ರತ್ಯೇಕ ಅಕೌಂಟ್ ನಂ ಕೊಟ್ಟು ಹಣ ಕಟ್ಟಿಸಿಕೊಳ್ಳುತ್ತಾನೆ.