ಕರ್ನಾಟಕ

karnataka

ETV Bharat / state

5 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ 7200 ಕೋಟಿ ಸಿಕ್ಕಿದೆ: ಸಚಿವ ಸಿ.ಟಿ. ರವಿ - ರಾಮನಗರದಲ್ಲಿ ಆಹಾರ ಮೇಳ

ರಾಮನಗರದ ಹೊರವಲಯದಲ್ಲಿ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಆಹಾರ ಮೇಳಕ್ಕೆ ಸಚಿವ ಸಿ.ಟಿ. ರವಿ ಭೇಟಿ ನೀಡಿದರು.

5 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ 7200 ಕೋಟಿ ಸಿಕ್ಕಿದೆ: ಸಚಿವ ಸಿ.ಟಿ. ರವಿ

By

Published : Oct 8, 2019, 5:11 AM IST

ರಾಮನಗರ: ಯುಪಿಎ ಸರ್ಕಾರದ ಅವಧಿಯಲ್ಲಿ ಎನ್‌ಡಿಆರ್‌ಎಫ್ ಹಾಗೂ ಎಸ್‌ಟಿಆರ್‌ಎಫ್‌ನಿಂದ 4138 ಕೋಟಿ ನೆರೆ ಪರಿಹಾರ ಸಿಕ್ಕಿದೆ, ಎನ್‌ಡಿಎ ಸರ್ಕಾರದಲ್ಲಿ 5 ವರ್ಷದಲ್ಲಿ 7200 ಕೋಟಿ ಸಿಕ್ಕಿದೆ ಎಂದು ಸಚಿವ ಸಿ.ಟಿ. ರವಿ ತಿಳಿಸಿದರು.

5 ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ 7200 ಕೋಟಿ ಸಿಕ್ಕಿದೆ: ಸಚಿವ ಸಿ.ಟಿ. ರವಿ

ರಾಮನಗರದಲ್ಲಿ ಮಾತನಾಡಿದ ಅವರು, ಅಂಕಿ ಅಂಶ ಬೇಕಾದ್ರೆ ವಿಧಾನಸೌಧದಲ್ಲೂ ಮುಂದಿಡ್ತೇವೆ, ಯಾವ ಕಾರಣಕ್ಕೂ ಪರಿಹಾರ ವಿಚಾರದಲ್ಲಿ ತಾರತಮ್ಯ ಮಾಡಲ್ಲ ಎಂದರು. ಇದೇ ವೇಳೆ ಜಾಸ್ತಿ ಹಾನಿಯಾದವರಿಗೆ 1 ಲಕ್ಷ ಕಡಿಮೆ ಹಾನಿಯಾದವರಿಗೆ 25 ಸಾವಿರದಿಂದ 50 ಸಾವಿರ ಬಿಡುಗಡೆ ಮಾಡಿದ್ದೇವೆ. ಕೆಲವರಿಗೆ ತಲುಪಿಲ್ಲ ಅಂದ್ರೇ ದಾಖಲೆಗಳ ತಪ್ಪಿನಿಂದ ಆಗಿರಬಹುದು, 100 ಕೋಟಿ ಬೆಲೆ ಬಾಳಿದ್ರು, 95000 ರೂಪಾಯಿ ಅಷ್ಟೇ ಕೇಂದ್ರ ಕೊಡುವುದು. ನಾವು ಉಳಿದ ಹಣ ಸೇರಿಸಿ 5 ಲಕ್ಷ ಕೊಡಲು ಮುಂದಾಗಿದ್ದೇವೆ ಎಂದು ಸರ್ಕಾರದ ನೆರೆ ನಿರ್ವಹಣೆಯನ್ನು ಸಮರ್ಥಿಸಿಕೊಂಡರು.

ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಚುನಾವಣೆಯ ಪೂರ್ವದಲ್ಲಿಯೇ ಬಿಎಸ್​ವೈ ಅವರೇ ನಮ್ಮ ಸಿಎಂ ಎಂದು ಘೋಷಣೆ ಮಾಡಿದ್ದೆವು. ಅದರಂತೆ ಬಿಎಸ್​ವೈ ಸಿಎಂ ಆಗಿದ್ದಾರೆ. ಯಡಿಯೂರಪ್ಪನವರನ್ನು ನಾವು ಬಹುಮತದಿಂದ ಆಯ್ಕೆ ಮಾಡಿರಲಿಲ್ಲ, ಸರ್ವಾನುಮತದಿಂದ ಆಯ್ಕೆ ಮಾಡಿದ್ದೆವು. ಯಡಿಯೂರಪ್ಪನವರೇ 5 ವರ್ಷ ಮುಂದುವರಿಯಬೇಕೆಂಬ ಅಪೇಕ್ಷೆ ಇದೆ ಆದರೆ ಎಚ್ಚರಿಕೆ ಇರಬೇಕು, ನಾವು ಸ್ಲಿಪ್ ಆಗಬಾರದು ಎಂದರು.

ವಿಪಕ್ಷ ಸ್ಥಾನದ ಆಯ್ಕೆಯಲ್ಲಿ ಕಾಂಗ್ರೆಸ್​ ಒಡೆದ ಮನೆಯಾಗಿದ್ದು, ಒಡೆದ ಮನಸ್ಸುಗಳ ಗುಂಪಾಗಿದೆ. ಸಿದ್ದರಾಮಯ್ಯ ಸರ್ವಾನುಮತದ ನಾಯಕರಾಗುವ ಸ್ಥಿತಿಯಲ್ಲಿಲ್ಲ, ಒಂದು ವೇಳೆ ಅವರೇ ವಿಪಕ್ಷ ನಾಯಕರಾದ್ರೆ ಒಂದು ಗುಂಪಿನ ನಾಯಕರಾಗುತ್ತಾರೆ ಅಷ್ಟೇ ಎಂದರು.

ಯತ್ನಾಳ್​ಗೆ ನೋಟೀಸ್ ನೀಡಿದ್ದಕ್ಕೆ ಸಮರ್ಥನೆ

ಬಿಜೆಪಿ ಶಾಸಕ ಬಸವನಗೌಡ ಪಾಟೀಲ್​ ಯತ್ನಾಳ್‌ಗೆ ಕೇಂದ್ರದಿಂದ ನೋಟೀಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಿ.ಟಿ. ರವಿ, ಪರಿಹಾರದ ಬಗ್ಗೆ ಮಾತನಾಡಿದ್ರೆ ಶೋಕಾಸ್ ನೋಟೀಸ್ ನೀಡಲ್ಲ, ಜನರ ಧ್ವನಿಯಾಗೋದಕ್ಕೆ ನಮ್ಮನ್ನ ಆರಿಸಿ ಕಳುಹಿಸಿರುವುದು. ಕೇವಲ ಪರಿಹಾರಕ್ಕೆ ಅಂತಾ ತಿಳಿದುಕೊಳ್ಳಬೇಡಿ ಅದನ್ನು ಬಿಟ್ಟು ಬೇರೆ ಬೇರೆ ಮಾತನಾಡಿದ್ದಾರೆ. ಆ ಕಾರಣವನ್ನ ಉಲ್ಲೇಖಿಸಿಯೇ ಶೋಕಾಸ್ ನೋಟೀಸ್ ಕೊಟ್ಟಿದ್ಧಾರೆ ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ನಾನು ಕೂಡಾ ಪ್ರತಿಭಟನೆ ಮಾಡುವ ಮೊದಲನೆಯವ ಅಂತೇಳಿದ್ದೇ ನನಗೇನು ನೋಟಿಸ್ ಕೊಟ್ಟಿಲ್ಲ, ಕರ್ನಾಟಕದ ಹಿತಾಶಕ್ತಿಯನ್ನ ಬಿಟ್ಟು ನಾವು ರಾಜಕಾರಣ ಮಾಡಲ್ಲ , ದೇಶದ ಹಿತಾಶಕ್ತಿ ಇಟ್ಕೊಂಡು ರಾಜ್ಯದ ಹಿತಾಶಕ್ತಿ ಗಮನದಲ್ಲಿರಿಸಿಕೊಂಡೇ ರಾಜಕಾರಣ ಮಾಡ್ತೇವೆ ಅದನ್ನ ಬಿಟ್ಟು ಮಾತನಾಡಿರುವುದಕ್ಕೆ ಶೋಕಾಸ್ ನೋಟೀಸ್ ನೀಡಿದ್ದಾರೆ ಅಷ್ಟೇ ಎಂದರು.

ABOUT THE AUTHOR

...view details