ಕರ್ನಾಟಕ

karnataka

ETV Bharat / state

ರಾಮನಗರ: ಡೆತ್ ನೋಟ್ ಬರೆದಿಟ್ಟು ಕಾರಿನಲ್ಲೇ ಉದ್ಯಮಿ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು ಕಾರಿನಲ್ಲೇ ಉದ್ಯಮಿ ಆತ್ಮಹತ್ಯೆ -ಮಾಡಿಕೊಂಡ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಘಟನೆ- ಬೆಂಗಳೂರಿನ ‌ಹೆಚ್​​ಎಸ್​​ಆರ್ ಲೇಔಟ್ ನಿವಾಸಿ ಆತ್ಮಹತ್ಯೆಗೆ ಶರಣಾದವರು

businessman-committed-suicide-in-car
ರಾಮನಗರ: ಡೆತ್ ನೋಟ್ ಬರೆದಿಟ್ಟು ಕಾರಿನಲ್ಲೇ ಉದ್ಯಮಿ ಆತ್ಮಹತ್ಯೆ

By

Published : Jan 1, 2023, 10:49 PM IST

ರಾಮನಗರ: ಕಾರಿನಲ್ಲೇ ಕುಳಿತು ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ಭಾನುವಾರ ಸಂಜೆ ನಡೆದಿದೆ. ಬೆಂಗಳೂರಿನ ‌ಹೆಚ್​​ಎಸ್​​ಆರ್ ಲೇಔಟ್ ನಿವಾಸಿ ಪ್ರದೀಪ್ (47) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಉದ್ಯಮಿ ಪ್ರದೀಪ್ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದಾರೆ. ಡೆತ್ ನೋಟ್​​ನಲ್ಲಿ ಪ್ರಭಾವಿ ರಾಜಕಾರಣಿ ‌ಸೇರಿದಂತೆ ಆರು ಜನರ ಹೆಸರು ಬರೆದಿಟ್ಟಿದ್ದಲ್ಲದೆ, ಸಾವಿನ ಬಗ್ಗೆಯೂ ವಿವರವಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಕಗ್ಗಲಿಪುರ ಪೊಲೀಸ್​ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಕೊಲೆ.. ಬೀದರ್​ ಜಿಲ್ಲೆಯಲ್ಲಿ ಹರಿದ ನೆತ್ತರು

ABOUT THE AUTHOR

...view details