ಕರ್ನಾಟಕ

karnataka

ETV Bharat / state

ರಾಮನಗರಕ್ಕೂ ತಟ್ಟಿದ ಮಂಗಳೂರು ಬಾಂಬ್​ ಬಿಸಿ: ಜಿಲ್ಲೆಯಲ್ಲಿ ಪೊಲೀಸ್​ ಹೈ ಅಲರ್ಟ್​ - ರಾಮಗನಗರ ಪೊಲೀಸ್​ ಹೈ ಅಲರ್ಟ್​ ಘೋಷಣೆ

ಈ ಹಿಂದೆ ಜಿಲ್ಲೆಯಲ್ಲಿ ಮೂವರು ಉಗ್ರರು ಪತ್ತೆಯಾದ ಹಿನ್ನೆಲೆ ನಗರದ ಬಸ್ ನಿಲ್ದಾಣ ಸೇರಿದಂತೆ ಆಯಕಟ್ಟಿನ‌ ಜಾಗದಲ್ಲಿ ಬಾಂಬ್​ ಪತ್ತೆ ದಳದಿಂದ ಶೋಧ ಕಾರ್ಯ ನಡೆದಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಿಗೂ ಭೇಟಿ ನೀಡಿರುವ ಬಾಂಬ್​ ಪತ್ತೆದಳದ ಸಿಬ್ಬಂದಿ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರದಲ್ಲೂ ಶೋಧ ಕಾರ್ಯ ನಡೆಸಿದ್ದಾರೆ.

bomb-squad-visited-to-ramanagar-district
ರಾಮನಗರ ಜಿಲ್ಲೆ

By

Published : Jan 21, 2020, 4:30 PM IST

ರಾಮನಗರ : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲೂ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

ನಗರದ ಬಸ್ ನಿಲ್ದಾಣ ಸೇರಿದಂತೆ ಆಯಕಟ್ಟಿನ‌ ಜಾಗದಲ್ಲಿ ಬಾಂಬ್​ ಪತ್ತೆ ದಳದಿಂದ ಶೋಧ ಕಾರ್ಯ ನಡೆದಿದೆ. ಜಿಲ್ಲೆಯ ನಾಲ್ಕು ತಾಲೂಕುಗಳಿಗೂ ಭೇಟಿ ನೀಡಿರುವ ಬಾಂಬ್​ ಪತ್ತೆದಳದ ಸಿಬ್ಬಂದಿ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರದಲ್ಲೂ ಶೋಧ ಕಾರ್ಯ ನಡೆಸಿದ್ದಾರೆ.

ರಾಮನಗರಕ್ಕೂ ತಟ್ಟಿದ ಮಂಗಳೂರು ಬಾಂಬ್​ ಬಿಸಿ

ನಗರದ ಪ್ರಮುಖ ಜಾಗಗಳಾದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣ ಸೇರಿದಂತೆ ವಿವಿಧ ಆಯಕಟ್ಟಿನ‌ ಜಾಗಗಳಲ್ಲಿ ಪರಿಶೀಲನೆ‌ ನಡೆಸುತ್ತಿರುವ ಸಿಬ್ಬಂದಿ ಬಾಂಬ್ ಪತ್ತೆಗಾಗಿ ಶೋಧಕಾರ್ಯ‌ ನಡೆಸಿದರು. ಈ ಹಿಂದೆ ರಾಮನಗರದಲ್ಲಿ ಮೂವರು ಉಗ್ರರನ್ನ ಬಂಧಿಸಿದ್ದ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಪೊಲೀಸ್ ಇಲಾಖೆ ತೀರ್ವ ಕಟ್ಟೆಚ್ಚರ ವಹಿಸಿದೆ.

ABOUT THE AUTHOR

...view details