ಕರ್ನಾಟಕ

karnataka

ETV Bharat / state

ಬೇರೆಯವರ ಸಂಕಷ್ಟ ಕಂಡು ಖುಷಿಪಡುವ ವ್ಯಕ್ತಿ ನಾನಲ್ಲ: ಡಿಸಿಎಂ ಕಾರಜೋಳ - Ramnagar

ಬಿಜೆಪಿ ಎಂದಿಗೂ ದ್ವೇಷದ ರಾಜಕೀಯ ಮಾಡುವುದಿಲ್ಲ. ಇಡಿ ಮತ್ತು ಐಟಿ ಸಾಂವಿಧಾನಿಕವಾಗಿ ಕೆಲಸ ಮಾಡುವ ಸಂಸ್ಥೆಗಳು ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎನ್ನುವ ಮೂಲಕ ಡಿಕೆಶಿ ಅವರನ್ನು ಇಡಿ ವಿಚಾರಣೆ ಮಾಡುತ್ತಿರುವುದರಲ್ಲಿ ಬಿಜೆಪಿ ಕೈವಾಡದವಿದೆ ಎಂಬ ಆರೋಪಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟನೆ ನೀಡಿದ್ದಾರೆ.

ಡಿಸಿಎಂ ಕಾರಜೋಳ

By

Published : Sep 3, 2019, 5:13 PM IST

ರಾಮನಗರ: ಬಿಜೆಪಿ ಎಂದಿಗೂ ದ್ವೇಷದ ರಾಜಕೀಯ ಮಾಡುವುದಿಲ್ಲ. ಇಡಿ ಮತ್ತು ಐಟಿ ಸಾಂವಿಧಾನಿಕ ಸಂಸ್ಥೆಗಳಾಗಿದ್ದು, ಅಧಿಕಾರಿಗಳು ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಡಿಕೆಶಿ ವಿಚಾರಣೆ ಕುರಿತು ಡಿಸಿಎಂ ಹೇಳಿಕೆ

ನಗರದಲ್ಲಿ‌ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅವರೂ ಕೂಡ ಅವರ ತನಿಖೆಗೆ ಸಹಕರಿಸುತ್ತಿದ್ದಾರೆ. ತನಿಖೆ ಬಳಿಕ ತಪ್ಪಿದ್ದರೆ ಶಿಕ್ಷೆಯಾಗುತ್ತೆ. ಇಲ್ಲದಿದ್ದರೆ ಆರೋಪ ಮುಕ್ತರಾಗಿ ಬರುತ್ತಾರೆ. ಆದ್ರೆ ಇದರಲ್ಲಿ ಬಿಜೆಪಿ ಅವರ ಪಾತ್ರ ಏನಿಲ್ಲವೆಂದು ಸ್ಪಷ್ಟಪಡಿಸಿದರು.

ಇನ್ನು, ಬೇರೆಯವರು ಕಷ್ಟದಲ್ಲಿದ್ದಾಗ ನೋಡಿ‌ ಸಂತೋಷ ಪಡುವಷ್ಟು ಕೆಟ್ಟ ಮನುಷ್ಯ ನಾನಲ್ಲ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದರು.

ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಸಚಿವ ಡಿ.ಕೆ.‌ ಶಿವಕುಮಾರ್​ಗೆ ಕರೆ ಮಾಡಿದ್ದರು ಎಂಬುದು ಶುದ್ಧ ಸುಳ್ಳು. ಕೆಲವರು ಸಾಂದರ್ಭಿಕವಾಗಿ ಮಾತನಾಡುತ್ತಾರೆ. ಇದಕ್ಕೆ ಬೆಲೆ ಕೊಡುವ ಅಗತ್ಯ ಇಲ್ಲವೆಂದು ಎಂಎಲ್​ಸಿ ಸಿ.ಎಂ. ಲಿಂಗಪ್ಪ ಅವರ ಆರೋಪಕ್ಕೆ ಕಾರಜೋಳ ಪ್ರತಿಕ್ರಿಯಿಸಿದರು.

ಬಿಜೆಪಿಯ ಕೆಲ ಶಾಸಕರ ಬಳಿ ಹಣದ ಬೇಡಿಕೆ ಇಟ್ಟಿದ್ದರು‌ ಎಂಬ ಆರೋಪದ ಬಗ್ಗೆ ಸದನದಲ್ಲಿ ಚರ್ಚೆಯಾಗಿತ್ತು. ಈ ವಿಷಯದ ಬಗ್ಗೆ ತನಿಖೆಯಾಗಲಿ ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದರು. ಅದಕ್ಕೆ ಸಾಕ್ಷಿ ಇದ್ದರೆ ನೀಡಲಿ. ಅಗತ್ಯ ಬಿದ್ದರೆ, ಅದರ ಬಗ್ಗೆಯೂ ತನಿಖೆ ಆಗಲಿ. ಆದ್ರೆ ಡಿಕೆಶಿ ಅವರು ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಹೇಳಿದ್ರು.

ABOUT THE AUTHOR

...view details