ಕರ್ನಾಟಕ

karnataka

ETV Bharat / state

ರಾಮನಗರ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳಿಗೆ ಬಿಗ್​ ಶಾಕ್​​ - ramanagara

ಬೆಂಗಳೂರು-ಮೈಸೂರು ಹೆದ್ದಾರಿ ಬದಿಗಳಲ್ಲಿ ರಾತ್ರಿ ವ್ಯಾಪಾರಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಬ್ರೇಕ್ ಹಾಕಿದ್ದಾರೆ.

ramanagara
ರಾಮನಗರ

By

Published : Dec 24, 2019, 5:20 PM IST

ರಾಮನಗರ:ಜಿಲ್ಲೆಯಲ್ಲಿನ ಹೆದ್ದಾರಿ ಬದಿಯ ವ್ಯಾಪಾರಿಗಳಿಗೆ ಜಿಲ್ಲಾಧಿಕಾರಿ ಬಿಗ್ ಶಾಕ್ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶ ಪತ್ರ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಡಬಾ, ಚಹಾ ಅಂಗಡಿ ಸೇರಿದಂತೆ ಹೋಟೆಲ್​ಗಳು ಇಡೀ ರಾತ್ರಿ ಯಾರ ಅಡೆತಡೆಯಿಲ್ಲದೆ ವ್ಯವಹರಿಸುತ್ತಿದ್ದವು. ಹೆದ್ದಾರಿಗಳಲ್ಲಿ ಇವುಗಳಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಬದಿಗಳಲ್ಲಿ ರಾತ್ರಿ ವ್ಯಾಪಾರಕ್ಕೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಬ್ರೇಕ್ ಹಾಕಿದ್ದಾರೆ.

ಜಿಲ್ಲೆಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275, ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209, ಬೆಂಗಳೂರು-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹಾದು ಹೋಗುವ ಎಲ್ಲಾ ರಸ್ತೆಯ ಹೆದ್ದಾರಿ ಪಕ್ಕದಲ್ಲಿನ ಡಾಬಾಗಳು, ಕೆಫೆಗಳು , ಹೋಟೆಲ್​ಗಳು ಸೇರಿದಂತೆ ಇತರೆ ಹೆದ್ದಾರಿ ಬದಿಯ ಅಂಗಡಿಗಳು ರಾತ್ರಿ 11ರ ಒಳಗೆ ಕಡ್ಡಾಯವಾಗಿ ಬಾಗಿಲು ಹಾಕುವಂತೆ ಈ ಮೂಲಕ ರಾತ್ರಿಯ ಹೊತ್ತು ವ್ಯಾಪಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದೇಶದಲ್ಲಿ ಸ್ಪಷ್ಟವಾಗಿ ಬೆಳಿಗ್ಗೆ 5:59ಕ್ಕೆ ಮುಂಚಿತವಾಗಿ 11:01ಗೆ ತಡವಾಗಿ ಯಾವುದೇ ಕಾರಣಕ್ಕೂ ವ್ಯಾಪಾರಸ್ಥರು ವ್ಯವಹರಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಮನವಿ‌ ಪತ್ರದ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. 2015ರ ಸೆಪ್ಟೆಂಬರ್​ನಿಂದ 2019 ಡಿಸೆಂಬರ್​ವರೆಗೆ ರಾತ್ರಿ ವೇಳೆ 66 ಕೊಲೆ, 14 ದರೋಡೆ, 53 ದರೋಡೆ ಯತ್ನ ಪ್ರಕರಣಗಳು ದಾಖಲಾಗಿವೆ. ಇದಲ್ಲದೇ 55 ಸುಲಿಗೆ, 12 ಸರಗಳ್ಳತನ, 655 ರಾತ್ರಿ ಕಳವು ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಅದರಲ್ಲೂ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾತ್ರಿ ಸಮಯದಲ್ಲಿಯೇ ಹೆಚ್ಚು ಅಪರಾಧ ಪ್ರಕರಣಗಳು ವರದಿಯಾಗಿದ್ದು ಇದಕ್ಕೆ ಕಾರಣವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ರಾಮನಗರ ಜಿಲ್ಲೆಯ ಹೆದ್ದಾರಿಗಳ ವ್ಯಾಪ್ತಿಯಲ್ಲಿ ರಾತ್ರಿ ವ್ಯಾಪಾರ ನಡೆಸದಂತೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಬ್ರೇಕ್ ಹಾಕಿ ಖಡಕ್ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details