ಕರ್ನಾಟಕ

karnataka

ETV Bharat / state

ರಾಮನಗರ : ಬೆಳ್ಳಂಬೆಳ್ಳಗ್ಗೆ ಕರಡಿ ದಾಳಿ,  ಗಾಯಗೊಂಡ ವ್ಯಕ್ತಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ - ಈಟಿವಿ ಭಾರತ ಕನ್ನಡ

ಇತ್ತೀಚೆಗೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಕಾಡಾನೆಗಳ ಹಿಂಡು ಡ್ರೋನ್​ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇಂದು ಬೆಳ್ಳಂಬೆಳ್ಳಗ್ಗೆ ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ನಡೆಸಿದೆ.

Bear attack on person in Ramanagara
ಬೆಳ್ಳಂಬೆಳ್ಳಗ್ಗೆ ಕರಡಿ ದಾಳಿ

By

Published : Oct 25, 2022, 11:32 AM IST

ರಾಮನಗರ :ಬೆಳ್ಳಂಬೆಳ್ಳಗ್ಗೆ ಏಕಾಏಕಿ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ರಾಮನಗರದ ಬಿಳಗುಂಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹುನುಮಂತಯ್ಯ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ. ಬೆಳಗ್ಗೆ ಎಂದಿನಂತೆ ಕೊಟ್ಟಿಗೆ ಕಸ ಸುರಿಯಲು ಮನೆಯ ಹಿಂಭಾಗ ಹೋದ ಸಂದರ್ಭದಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಈ ಕರಡಿ ಏಕಾಏಕಿ ಇವರ ಮೇಲೆ ಬಿದ್ದಿದೆ.

ಈ ವೇಳೆ, ಕರಡಿ ಹನುಮಂತಯ್ಯ‌ನ ಮೇಲೆ ತೀವ್ರ ಸ್ವರೂಪದಲ್ಲಿ ಗಾಯಗೊಳಿಸಿದ್ದು, ಕೂಡಲೇ ಅವರನ್ನ ರಾಮನಗರ ‌ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಕರಡಿ ಹಿಡಿದು ಕಾಡಿಗೆ ಕಳುಹಿಸುವುದಾಗಿ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ :ದೀಪಾವಳಿ ಹಬ್ಬದಂದು ಬಾಲಕಿ ಬಲಿ ಪಡೆದ ಚಿರತೆ: ಕಳೆದ 8 ದಿನಗಳಲ್ಲಿ 5 ಮಂದಿ ಸಾವು

ABOUT THE AUTHOR

...view details