ಕರ್ನಾಟಕ

karnataka

ETV Bharat / state

ಹಾರೋಹಳ್ಳಿ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ: ಧಗಧಗ ಹೊತ್ತಿ ಉರಿದ ಫ್ಯಾಕ್ಟರಿ - Ramngar industrial area

ಹಾರೋಹಳ್ಳಿಯ ಶಕ್ತಿ ಬ್ಯಾಟರೀಸ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಕಾರ್ಖಾನೆಯೊಳಗಿದ್ದ ಕಾರ್ಮಿಕರು ಹೊರ ಓಡಿಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

battery-factory-get-fire-in-ramnagar
ಹಾರೋಹಳ್ಳಿ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ: ಧಗಧಗ ಹೊತ್ತಿ ಉರಿದ ಫ್ಯಾಕ್ಟರಿ

By

Published : Jan 5, 2021, 7:28 PM IST

ರಾಮನಗರ: ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇಡೀ ಕಾರ್ಖಾನೆಗೆ ಬೆಂಕಿ ವ್ಯಾಪಿಸಿದೆ. ಕಾರ್ಖಾನೆಗೆ ಬಳಸಿದ್ದ ಥರ್ಮಕೋಲ್​​​ಗೆ ತಗುಲಿದ್ದ ಬೆಂಕಿ ಬಳಿಕ ಇಡೀ ಕಾರ್ಖಾನೆಗೂ ಹರಡಿದೆ.

ಹಾರೋಹಳ್ಳಿ ಕಾರ್ಖಾನೆಯಲ್ಲಿ ಆಕಸ್ಮಿಕ ಬೆಂಕಿ

ಹಾರೋಹಳ್ಳಿಯ ಶಕ್ತಿ ಬ್ಯಾಟರೀಸ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಕಾರ್ಖಾನೆಯೊಳಗಿದ್ದ ಕಾರ್ಮಿಕರು ಹೊರ ಓಡಿಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸದ್ಯ ಬೆಂಕಿ ಕೆನ್ನಾಲಿಗೆ ಇತರೆ ಕಾರ್ಖಾನೆಗಳಿಗೂ ಹರಡುವ ಭೀತಿ ಎದುರಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ.

ಇದನ್ನೂ ಓದಿ:ಗಂಗೂಲಿ ರಾಯಭಾರಿಯ ಫಾರ್ಚೂನ್​ ಅಡುಗೆ ಎಣ್ಣೆ ಜಾಹೀರಾತು ತಾತ್ಕಾಲಿಕ ಸ್ಥಗಿತ

ABOUT THE AUTHOR

...view details