ಕರ್ನಾಟಕ

karnataka

ETV Bharat / state

ಎಸ್​​ಆರ್​ಎಸ್​ ಬೆಟ್ಟದಿಂದ ಜಿಗಿದು ಬೆಂಗಳೂರಿನ ಹೆಲ್ತ್ ಇನ್ಸ್​ಸ್ಪೆಕ್ಟರ್ ಆತ್ಮಹತ್ಯೆ - ಪೀಣ್ಯ ಪೊಲೀಸ್​ ಠಾಣೆ

ಬೆಂಗಳೂರು ರುಕ್ಮಿಣಿ ನಗರದ ನಿವಾಸಿ ಹೆಲ್ತ್ ಇನ್ಸ್​ಸ್ಪೆಕ್ಟರ್ ಪ್ರಶಾಂತ್ ಎಸ್​​ಆರ್​ಎಸ್​ ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

bangalore-health-inspector-commits-suicide
ಹೆಲ್ತ್ ಇನ್ಸ್ಪೆಕ್ಟರ್ ಆತ್ಮಹತ್ಯೆ

By

Published : Feb 17, 2020, 4:15 PM IST

ರಾಮನಗರ:ಬೆಟ್ಟದಿಂದ ಜಿಗಿದು ಹೆಲ್ತ್ ಇನ್ಸ್ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ‌ ಎಸ್​​ಆರ್​ಎಸ್​ ಬೆಟ್ಟದ ತಪ್ಪಲಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನ ಪ್ರಶಾಂತ್(38) ಎಂದು ಗುರುತಿಸಲಾಗಿದೆ.

ಬೆಂಗಳೂರಿನ ಹೆಲ್ತ್ ಇನ್ಸ್​​ಸ್ಪೆಕ್ಟರ್​ ಆತ್ಮಹತ್ಯೆ

ಬೆಂಗಳೂರಿನ ಯಲಹಂಕದಲ್ಲಿ ಆರೋಗ್ಯ ನಿರೀಕ್ಷಕನಾಗಿ ಕೆಲಸ ಮಾಡುತ್ತಿದ್ದ ಬೆಂಗಳೂರು ರುಕ್ಮಿಣಿ ನಗರದ ನಿವಾಸಿ ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ. ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ಹೊರ ಬಂದಿದ್ದ ಪ್ರಶಾಂತ್ ನಾಪತ್ತೆಯಾಗಿರುವ ಬಗ್ಗೆ ಪೀಣ್ಯ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದರು.

ಸದರಿ ದೂರಿನ ಅನ್ವಯ ಪೀಣ್ಯ ಪೊಲೀಸರು ಮೊಬೈಲ್ ಟ್ರ್ಯಾಕ್ ಮಾಡಿದ್ದರು, ಎಸ್​​ಆರ್​ಎಸ್​ ಬೆಟ್ಟದ ಕಡೆ ಲೋಕೇಷನ್ ಪತ್ತೆಯಾಗಿತ್ತು. ಬೆಟ್ಟದ ಸುತ್ತ ಪೊಲೀಸರು ಪರಿಶೀಲಿಸಿದಾಗ ಬೆಟ್ಟದ ಬಳಿ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ನಂತರ ಬೆಟ್ಟದ ಸುತ್ತಮುತ್ತ ಹುಡುಕಿದಾಗ ಪ್ರಶಾಂತ್ ಮೃತದೇಹ ಪತ್ತೆಯಾಗಿದೆ.

ಪ್ರಶಾಂತ್ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details