ಕರ್ನಾಟಕ

karnataka

ETV Bharat / state

ರೇಷ್ಮೆ ನಗರಿಯಲ್ಲಿ ಬಾಳೆಗೆ ಬೆಲೆಯಿಲ್ಲ...ರೈತರ ಗೋಳು ಕೇಳೋರಿಲ್ಲ - ರಾಮನಗರ ಲೆಟೆಸ್ಟ್​ ನ್ಯೂಸ್​

ರಾಮನಗರ ಸೇರಿದಂತೆ ಚನ್ನಪಟ್ಟಣ,ಕನಕಪುರ ಭಾಗಗಳಲ್ಲಿ ಈ ಬಾರಿ ರೇಷ್ಮೆ ಜೊತೆಗೆ ಬಾಳೆ, ಏಲಕ್ಕಿ ಬೆಳೆಯನ್ನು ರೈತರು ಬೆಳೆದಿದ್ದಾರೆ.ಕೊರೊನಾದಿಂದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ.

Banana rate decreased in Ramanagara
ರೇಷ್ಮೆ ನಗರಿಯಲ್ಲಿ ಬಾಳೆಗೆ ಬೆಲೆಯಿಲ್ಲ

By

Published : Apr 17, 2020, 11:23 AM IST

ರಾಮನಗರ :ರೇಷ್ಮೆ ಬೆಳೆಗೆ ಪ್ರಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಈ ಬಾರಿ ರೇಷ್ಮೆ ಸೇರಿದಂತೆ ಸಾವಿರಾರು ಎಕೆರೆಯಲ್ಲಿ ಬೆಳೆಗಾರರು ಬಾಳೆಯನ್ನು ಬೆಳೆಯಲಾಗಿದೆ. ಆದರೆ ಕೊರೊನಾದಿಂದ ವ್ಯಾಪಾರ-ವಾಹಿವಾಟಿಲ್ಲದೆ ರೈತರು ಆತಂಕಕ್ಕಿಡಾಗಿದ್ದಾರೆ.

ಕಂಗಾಲಾರುವ ಬಾಳೆ ಬೆಳೆಗಾರರು

ಜಿಲ್ಲೆಯಲ್ಲಿ ರೇಷ್ಮೆ ಹಾಗೂ ಮಾವು ಹೆಚ್ಚಾಗಿ ಬೆಳೆಯಲಾಗುತ್ತದೆ. ಇದರ ಜೊತೆಗೆ ಸುಮಾರು 1800 ಎಕರೆ ಪ್ರದೇಶದಲ್ಲಿ ಬಾಳೆಯನ್ನು ರೈತರು ಬೆಳೆದಿದ್ದಾರೆ. ಆದರೆ ಈ ಬಾರಿ ಕೊರೊನಾ ಹೊಡೆತದಿಂದ ಬಾಳೆ ಬೆಳೆಗಾರರು ಸಂಪೂರ್ಣ ಕಂಗಾಲಾಗಿದ್ದಾರೆ.

ಚನ್ನಪಟ್ಟಣ ಕೋಡಂಬಳ್ಳಿ ಗ್ರಾಮದ ಮಹೇಂದ್ರ ಎಂಬ ಬಾಳೆ ಬೆಳೆಗಾರ ತನ್ನ 6 ಎಕರೆಯಲ್ಲಿ ಏಲಕ್ಕಿ, ಪಚ್ಚಬಾಳೆಯನ್ನು ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದೆ ಬೆಳೆಯನ್ನು ಕಟಾವ್ ಮಾಡದೆ ತೋಟದಲ್ಲೇ ಬಿಟ್ಟಿದ್ದಾರೆ.ಇದರಿಂದ ಬೇಸತ್ತು ರೈತ ಅಕ್ಕಪಕ್ಕದ ಗ್ರಾಮದ ಜನರಿಗೆ ಬಾಳೆಗೊನೆಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

ಲಕ್ಷಗಟ್ಟಲೇ ಹಣ ವ್ಯಯ ಮಾಡಿ ಬಾಳೆ ಬೆಳೆಯನ್ನು ಬೆಳೆಯಲಾಗಿದೆ. ಆದರೆ ಕೊರೊನಾದಂದಿ ನಮಗೆ ಸಾಕಷ್ಟು ನಷ್ಟವಾಗಿದೆ. ಈ ಬಾರಿ ಬೆಳೆ ಚೆನ್ನಾಗಿ ಬಂದಿತ್ತು. ಸುಮಾರು 8 ರಿಂದ 10 ಲಕ್ಷಗಳಷ್ಟು ಆದಾಯ ಬರುವ ನಿರೀಕ್ಷೆಯಿತ್ತು. ಆದರೆ ಎಲ್ಲವೂ ಹಾಳಾಗಿ ಹೋಗಿದೆ ಎಂದು ಬೆಳೆಗಾರ ಮಹೇಂದ್ರ ತಮ್ಮ ಅಳಲನ್ನು ತೋಡಿಕೊಂಡರು.

ಇನ್ನೂ ಬಿಡದಿಯ ಹೆಗ್ಗಡಗೆರೆ ಗ್ರಾಮದ ಶಿವಲಿಂಗೇಗೌಡ ಎಂಬ ರೈತ ಸುಮಾರು 2.15 ಎಕರೆ ಭೂಮಿಯಲ್ಲಿ ಪಚ್ಚಬಾಳೆಯನ್ನು ಬೆಳೆದಿದ್ದಾರೆ. ಅದರೆ ಬಾಳೆ ಖರೀದಿ ಮಾಡಲು ಸ್ಥಳೀಯ ಎಪಿಎಂಸಿ ಮುಂದಾಗುತ್ತಿಲ್ಲ. ಜೊತೆಗೆ ಬೆಂಗಳೂರಿನ ಲಾಲ್​​ಬಾಗ್​​ನಲ್ಲಿ ಪಿಎಂಸಿ ಮಾರ್ಕೆಟ್​ನಲ್ಲಿ ಬೆಳೆ ಖರೀದಿಗೆ ಇಂಡೆಂಟ್ ಕೂಡ ಕೊಡುತ್ತಿಲ್ಲ ಎಂದು ರೈತ ಬೇಸರ ವ್ಯಕ್ತಪಡಿಸಿದ್ದಾರೆ.

ಕೊರೊನಾ ಹೊಡೆತಕ್ಕೆ ‌ದೇಶಕ್ಕೆ ದೇಶವೇ ತತ್ತರಿಸಿದೆ. ಅಲ್ಲದೆ ರೈತರ ಕೃಷಿ ಬೆಳೆಗಳೆಲ್ಲ ಸಂಪೂರ್ಣ ನೆಲೆಕಚ್ಚಿದೆ. ಹಾಗಾಗಿ ರೈತರ ಬೆಳೆಗಳನ್ನು ಸರ್ಕಾರ ಖರೀದಿ ಮಾಡಿ ರೈತರ ನೆರವಿಗೆ ಬರಬೇಕೆಂದು ನೊಂದ ರೈತರು ಒತ್ತಾಯಿಸಿದ್ದಾರೆ.

ABOUT THE AUTHOR

...view details