ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ದುಷ್ಕರ್ಮಿಗಳಿಂದ 300 ಬಾಳೆ ಗಿಡ ನಾಶ - ಬಾಳೆ ಬೆಳೆ ನಾಶಪಡಿಸಿದ ದುಷ್ಕರ್ಮಿಗಳು

ರಾಮನಗರ ತಾಲೂಕಿನ ‌ಮಾಗಡಿ ರಸ್ತೆಯಲ್ಲಿರುವ ತಿಮ್ಮಸಂದ್ರ ಗ್ರಾಮದಲ್ಲಿ ರೈತ ರಾಜಣ್ಣ ಎಂಬುವರ ತೋಟದಲ್ಲಿ 300ಕ್ಕೂ ಅಧಿಕ ಬಾಳೆ ಗಿಡಗಳನ್ನು ಕತ್ತರಿಸಿ ದುಷ್ಕರ್ಮಿಗಳು ನಾಶಪಡಿಸಿದ್ದಾರೆ.

banana corp destroyed in ramanagar
ಬಾಳೆ ಬೆಳೆ ನಾಶ

By

Published : Jun 6, 2020, 3:50 PM IST

ರಾಮನಗರ: ಸುಮಾರು 300ಕ್ಕೂ ಅಧಿಕ ಬಾಳೆ ಗಿಡಗಳನ್ನು ದುಷ್ಕರ್ಮಿಗಳು ನಾಶಪಡಿಸಿರುವ ಘಟನೆ ರಾಮನಗರ ತಾಲೂಕಿನ ‌ಮಾಗಡಿ ರಸ್ತೆಯಲ್ಲಿರುವ ತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.

ರೈತ ರಾಜಣ್ಣ ಎಂಬುವರಿಗೆ ಸೇರಿದ ತೋಟ ಇದಾಗಿದೆ. ರಾಜಣ್ಣ ಬೆಳಗ್ಗೆ ತೋಟಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಯಾರು? ಯಾವ ಕಾರಣಕ್ಕೆ ಇಂತಹ ಕೃತ್ಯ ಎಸಗಿದ್ದಾರೋ ಗೊತ್ತಿಲ್ಲ. ನಮಗೆ ಯಾರ ಮೇಲೂ ಯಾವುದೇ ಅನುಮಾನವಿಲ್ಲ. ಆದರೆ ಮಕ್ಕಳಂತೆ ಸಾಕಿದ್ದ ಬಾಳೆ ಗಿಡಗಳನ್ನು ಪಾಪಿಗಳು ಕಡಿದು ಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ ರಾಜಣ್ಣ.

ನಾಶವಾಗಿರುವ ಬಾಳೆ ಗಿಡಗಳು

ಬಾಳೆ ಗೊನೆಗಳು ಕಟಾವಿಗೆ ಬಂದಿದ್ದವು. ಬಾಳೆಯಿಂದ ಉತ್ತಮ ಆದಾಯದ ನಿರೀಕ್ಷೆಯೂ ಇತ್ತು. ಈ ಘಟನೆಯಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ ಎಂದು ನೊಂದು ನುಡಿದ ರೈತ, ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದರು.

ಬಾಳೆ ಗಿಡಗಳನ್ನು ನಾಶಪಡಿಸಿರುವುದು

ABOUT THE AUTHOR

...view details