ರಾಮನಗರ:ಬಿಸಿ ಸಾಂಬಾರ್ ಮೈಮೇಲೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದೇವರ ಹೊಸಹಳ್ಳಿಯಲ್ಲಿ ನಡೆದಿದೆ.
ಚೌಡೇಶ್ ಮತ್ತು ರಾಧಾ ದಂಪತಿಯ ಪುತ್ರ ಧನ್ವಿಕ್ ಮೃತ ಮಗು. ಮನೆಯಲ್ಲಿ ಮಗು ಗ್ಯಾಸ್ ಸ್ಟೌವ್ ಪೈಪ್ ಹಿಡಿದು ಆಟವಾಡುವಾಗ ಸ್ಟೌವ್ ಮೇಲಿದ್ದ ಸಾಂಬರ್ ಪಾತ್ರೆ ಮೈಮೇಲೆ ಬಿದ್ದಿದೆ.