ಕರ್ನಾಟಕ

karnataka

ETV Bharat / state

ಗಾಂಜಾ ಮಾರಾಟ: ರಾಮನಗರ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ - Ramanagara police

ರಾಮನಗರದ ಐಜೂರು ವ್ಯಾಪ್ತಿಯ ಹನುಮಂತನಗರದ ಮನೆಯೊಂದರಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೋಲೀಸರು ದಾಳಿ‌ ನಡೆಸಿ 44 ಕೆ.ಜಿ ಗಾಂಜಾ ವಶಕ್ಕೆ ಪಡೆದು, ಸಿದ್ದಿಕ್ ಪಾಷಾ, ಬೈರೇಗೌಡ ಹಾಗೂ ಕೊಡಗು ಮೂಲದ ಮಹಮ್ಮದ್ ಅಲಿ, ಮಹಮ್ಮದ್ ಇಸ್ಮಾಯಿಲ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಮಾರಾಟ

By

Published : Sep 2, 2019, 1:22 PM IST

Updated : Sep 2, 2019, 2:09 PM IST

ರಾಮನಗರ : ಮನೆಯೊಂದರಲ್ಲಿ ಅಡಗಿಸಿಟ್ಟಿದ್ದ ಭಾರಿ ಮೊತ್ತದ ಗಾಂಜಾ ಪತ್ತೆಹಚ್ಚಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ರಾಮನಗರ ಪೋಲಿಸರು ಯಶಸ್ವಿಯಾಗಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ

ರಾಮನಗರದ ಐಜೂರು ವ್ಯಾಪ್ತಿಯ ಹನುಮಂತನಗರದ ಮನೆಯೊಂದರಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೋಲೀಸರು ದಾಳಿ‌ ನಡೆಸಿದ್ದಾರೆ. ದಾಳಿ ವೇಳೆ 44 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದು ಸಿದ್ದಿಕ್ ಪಾಷಾ, ಬೈರೇಗೌಡ ಹಾಗೂ ಕೊಡಗು ಮೂಲದ ಮಹಮ್ಮದ್ ಅಲಿ, ಮಹಮ್ಮದ್ ಇಸ್ಮಾಯಿಲ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹ್ಮದ್ ಅಲಿ‌ ಮತ್ತು ಮಹ್ಮದ್ ಇಸ್ಮಾಯಿಲ್ ಮಾರಾಟ ಮಾಡಲಿಕ್ಕಾಗಿ ಮಾಲು ಕೊಂಡುಕೊಳ್ಳಲು ಬಂದಿದ್ದರು ಇವರು ಕೊಡಗು ಮೈಸೂರು ವ್ಯಾಪ್ತಿಯಷ್ಟೇ ಅಲ್ಲದೆ ಪಕ್ಕದ ಕೇರಳಕ್ಕೂ ಸರಬರಾಜು ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಗಾಂಜಾ ಪ್ರತಿ ಕೆ.ಜಿ ಗೆ 10 ಸಾವಿರದಂತೆ ಮಾರಾಟ ಮಾಡುತ್ತಿದ್ದ ಆರೋಪಿ ಸಿದ್ದಿಕ್ ಪಾಷಾ ಮಾಲನ್ನು ಭೈರೇಗೌಡ ಎಂಬುವವನ ಮನೆಯಲ್ಲಿ ಅಡಗಿಸಿಟ್ಟಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮತ್ತಷ್ಟು ಮಾಹಿತಿ ಕಲೆ‌ಹಾಕಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ ತಿಳಿಸಿದ್ದಾರೆ.

Last Updated : Sep 2, 2019, 2:09 PM IST

ABOUT THE AUTHOR

...view details