ಕರ್ನಾಟಕ

karnataka

ETV Bharat / state

ರಾಮನಗರ - ಚನ್ನಪಟ್ಟಣ ನಡುವೆ ಆರ್ಟ್ ಅಂಡ್ ಕ್ರಾಫ್ಟ್ ವಿಲೇಜ್: ಡಿಸಿಎಂ ಅಶ್ವತ್ಥ್ ನಾರಾಯಣ - DCM Ashwathth Narayana

ಚನ್ನಪಟ್ಟಣ ಗೊಂಬೆಗಳ ಉದ್ಯಮ ನಶಿಸುತ್ತಿರುವ ಹಿನ್ನೆಲೆ ರಾಮನಗರ - ಚನ್ನಪಟ್ಟಣ ಮಧ್ಯೆ ಆರ್ಟ್ ಅಂಡ್ ಕ್ರಾಫ್ಟ್ ವಿಲೇಜ್ ಮಾಡಬೇಕಿದೆ. ಅದರಿಂದಾಗಿ ಉದ್ಯೋಗಗಳು ಸೃಷ್ಟಿಯಾಗುತ್ತೆ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ತಿಳಿಸಿದರು.

art-and-craft-village-between-ramanagara-channapatna
ಡಾ.ಅಶ್ವತ್ಥ್ ನಾರಾಯಣ, ಡಿಸಿಎಂ

By

Published : Jan 27, 2020, 5:25 AM IST

ರಾಮನಗರ: ಚನ್ನಪಟ್ಟಣ ಗೊಂಬೆಗಳ ಉದ್ಯಮ ನಶಿಸುತ್ತಿರುವ ಹಿನ್ನೆಲೆ ರಾಮನಗರ - ಚನ್ನಪಟ್ಟಣ ಮಧ್ಯೆ ಆರ್ಟ್ ಅಂಡ್ ಕ್ರಾಫ್ಟ್ ವಿಲೇಜ್ ಮಾಡಬೇಕಿದ್ದು, ಅದರಿಂದಾಗಿ ಉದ್ಯೋಗಗಳು ಸೃಷ್ಟಿಯಾಗುತ್ತೆ ಎಂದು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ತಿಳಿಸಿದರು.

ಡಾ.ಅಶ್ವತ್ಥ್ ನಾರಾಯಣ, ಡಿಸಿಎಂ

ರಾಮನಗರ ಜಿಲ್ಲೆಯ ಕಲಾ ಕೌಶಲ್ಯತೆ ಉಳಿಯಬೇಕಿದೆ. ಜೂನ್ 1 ರಂದು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಬೆಳ್ಳಿಹಬ್ಬ ನಡೆಯಲಿದೆ. ಆ ದಿನ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕ್ಯಾಂಪಸ್​ಗೆ ಶಂಕು ಸ್ಥಾಪನೆ ನೆರವೇರಲಿದೆ. ಜೊತೆಗೆ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ನಡೆಸುವ ಗುರಿ ಇದೆ. ವಿಶ್ವವಿದ್ಯಾಲಯದ ಜಮೀನಿನ ವಿಚಾರವಾಗಿ ಕೆಲ ಸಮಸ್ಯೆಗಳಿವೆ ಅದನ್ನು ಬಗೆಹರಿಸುವ ವಿಶ್ವಾಸವಿದೆ ಎಂದರು.

ಈ ಭಾಗದ ಜನರ ಬಹುದಿನದ ಕನಸು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕ್ಯಾಂಪಸ್​. ಇದರಿಂದ ಸಾವಿರಾರು ಜನರಿಗೆ ಉದ್ಯೋಗ, ಶಿಕ್ಷಣ ಸಿಗಲಿದೆ. ಈ ಜಿಲ್ಲೆಯ ಜನರೇ ಉದ್ಯೋಗಗಳನ್ನು ಪಡೆಯಬೇಕು ಎಂದರು.

ABOUT THE AUTHOR

...view details