ಕರ್ನಾಟಕ

karnataka

ETV Bharat / state

ನಿತ್ಯಾನಂದ ಸ್ವಾಮಿ ವಿರುದ್ಧ ಅರೆಸ್ಟ್ ವಾರೆಂಟ್​​​​ - nityananda swami latest news

ವಿವಾದಿತ ಸ್ವಾಮಿ ನಿತ್ಯಾನಂದನ ವಿರುದ್ಧ ರಾಮನಗರದ 3ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಸಿದ್ದಲಿಂಗಪ್ರಭು ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ.

Arrest warrant against controversial Swami Nityananda
ವಿವಾದಿತ ಸ್ವಾಮಿ ನಿತ್ಯಾನಂದನ ವಿರುದ್ಧ ಅರೆಸ್ಟ್ ವಾರೆಂಟ್!

By

Published : Feb 19, 2020, 7:56 PM IST

ರಾಮನಗರ: ವಿವಾದಿತ ಸ್ವಾಮಿ ನಿತ್ಯಾನಂದನ ವಿರುದ್ಧ ರಾಮನಗರದ 3ನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಸಿದ್ದಲಿಂಗಪ್ರಭು ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ.

ವಿವಾದಿತ ಸ್ವಾಮಿ ನಿತ್ಯಾನಂದನ ವಿರುದ್ಧ ಅರೆಸ್ಟ್ ವಾರೆಂಟ್

ಹೈಕೋರ್ಟ್​ನಲ್ಲಿ ಜಾಮೀನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಫೆ. 5ರಂದು ಹೈಕೋರ್ಟ್‌ನಲ್ಲಿ ನಿತ್ಯಾನಂದ ಸ್ವಾಮಿ ವಿದೇಶ ಪ್ರವಾಸ ಮತ್ತು ನ್ಯಾಯಾಲಯಕ್ಕೆ ಗೈರಾಗಿದ್ದರ ಹಿನ್ನೆಲೆಯಲ್ಲಿ ಹೈಕೋಟ್​ನಲ್ಲಿ ಬೇಲ್ ರದ್ದು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆದ ವಿಚಾರಣೆಯಲ್ಲಿ 3ನೇ ಜಿಲ್ಲಾ ಸತ್ರ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಅರೆಸ್ಟ್ ವಾರೆಂಟ್ ಹೊರಡಿಸಿದ್ದು, ಜಾಮೀನು ಮುಚ್ಚಳಿಕೆ, ಬೇಲ್ ಬಾಂಡ್ ಮುಟ್ಟುಗೋಲಿಗೆ ಆದೇಶಿಸಿದ್ದಾರೆ ಎಂದು ನಿತ್ಯಾನಂದನ ವಿರುದ್ಧ ವಾದ ಮಂಡಿಸಿದ್ದ ಸರ್ಕಾರಿ ಪರ ವಕೀಲ ರಘು ಮಾಹಿತಿ ನೀಡಿದರು.

ABOUT THE AUTHOR

...view details