ಕರ್ನಾಟಕ

karnataka

ETV Bharat / state

ಅರ್ಕಾವತಿ‌ ಕಲುಷಿತ... ನದಿ ಶುದ್ಧೀಕರಣಕ್ಕೆ ಸ್ಥಳೀಯರ ಮನವಿ - ರಾಮನಗರ

ರಾಮನಗರದ ಹೃದಯ ಭಾಗದಲ್ಲಿರುವ ಅರ್ಕಾವತಿ‌ ನದಿ ಇಂದು ಕಲ್ಮಶಗಳ ಆಗರವಾಗಿ ಪರಿಣಮಿಸಿದೆ. ನಗರದ ತ್ಯಾಜ್ಯ ಹಾಗೂ ಡ್ರೈನೇಜ್ ಸೇರಿದಂತೆ ಯುಜಿಡಿ ಸಂಪರ್ಕ ಕೂಡ ನೇರವಾಗಿ ಅರ್ಕಾವತಿಗೆ ಬಿಟ್ಟ ಪರಿಣಾಮ ರೋಗರುಜಿನಗಳ ಆವಾಸ ಸ್ಥಾನವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಜೀವನದಿ

By

Published : Aug 27, 2019, 5:48 AM IST

ರಾಮನಗರ: ನಗರದ ಮಧ್ಯದಲ್ಲೇ ಹರಿಯುತ್ತ 60-70ರ ದಶಕದಲ್ಲಿ ನಗರದ ಜನತೆಗೆ ಕುಡಿಯುವ ನೀರಿನ‌ ಬವಣೆ ನೀಗಿಸುತ್ತಿದ್ದ ಅರ್ಕಾವತಿ ನದಿ ನೀರನ್ನು ಇಂದು ಕುಡಿಯುವುದಕ್ಕೆ ಬಳಸಲಾರದಷ್ಟು ಕಲುಷಿತಗೊಂಡಿದೆ.

ನಗರದಲ್ಲಿ ಕೆಡವುತ್ತಿರುವ ಹಳೆಯ ಕಟ್ಟಡಗಳ ತ್ಯಾಜ್ಯವನ್ನು ನದಿ‌ಯೊಳಕ್ಕೆ‌ ಸುರಿಯುವುದು ಹಾಗೂ ನಗರದ ತ್ಯಾಜ್ಯವನ್ನು ತಂದು ನದಿಯೊಡಲ‌ನ್ನು ಬಗೆದು‌ ಮುಚ್ಚಿ‌ಹೋಗಲಾಗುತ್ತಿದೆ ಎನ್ನುವ ದೂರುಗಳು ಕೇಳಿ‌ಬಂದಿವೆ. ಇನ್ನೂ ಮಿತಿ ಮೀರಿದ ತ್ಯಾಜ್ಯ ಶೇಖರಣೆಯಾಗುತ್ತಿದ್ದು, ಇಲ್ಲಿನ ರಾಘವೇಂದ್ರ ಕಾಲೋನಿ ಸೇರಿದಂತೆ ಬಾಲಗೇರಿ ಭಾಗಗಳಲ್ಲಿ ಸ್ಥಳೀಯರಿಗೆ ಚರ್ಮ ಸಮಸ್ಯೆ ಕಂಡು ಬರುತ್ತಿದೆ.

ಅರ್ಕಾವತಿ‌ ನದಿ ಇಂದು ಕಲ್ಮಶಗಳ ಆಗರ

ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದಾಗ ಅರ್ಕಾವತಿ‌ ನದಿ ಶುದ್ಧೀಕರಣಕ್ಕಾಗಿಯೇ ನಂದಿ ಬೆಟ್ಟದಿಂದ‌ ಹಿಡಿದು ಸಂಗಮದವರೆಗೂ ಯೋಜನೆಯೊಂದನ್ನು ಸಿದ್ಧಪಡಿಸಿತ್ತು. ನಂತರ‌ ಬಂದ‌ ಕಾಂಗ್ರೆಸ್ ಸರ್ಕಾರ ಅದನ್ನು ಮೂಲೆಗೆ ಎಸೆದಿತ್ತು. ಇದೀಗ‌ ಮತ್ತೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ಇನ್ನಾದರೂ ಯೋಜನೆ‌ ಪೂರ್ಣಗೊಳಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ABOUT THE AUTHOR

...view details