ಕರ್ನಾಟಕ

karnataka

ETV Bharat / state

ಸಿಡಿ ಇಟ್ಕೊಂಡ್ ಈಗ ಕುಮಾರಸ್ವಾಮಿ ಬ್ಲ್ಯಾಕ್ ಮೇಲ್ ಮಾಡ್ತಿರಾ?: ಅಶ್ವತ್ಥ ನಾರಾಯಣ್ ಗೌಡ

ಕುಮಾರಸ್ವಾಮಿಯವರ ಸಿಡಿ ಇಟ್ಕೊಂಡ್ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದರೆಂದು ಅಶ್ವತ್ಥ ನಾರಾಯಣ್ ಗೌಡ ಕಿಡಿಕಾಡಿದರು - ರಾಮನಗರ ಜಿಲ್ಲೆ ಹೋಬಳಿ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಸೇರ್ಪಡೆ ಕಾರ್ಯಕ್ರಮದ ವೇಳೆ ಈ ಆರೋಪ - ರಾಜಕೀಯವಾಗಿ‌ ಮಾತನಾಡಿ‌ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್​​ಗೆ ಟಾಂಗ್ ಕೊಟ್ಟ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಅಶ್ವತ್ಥ ನಾರಾಯಣ್ ಗೌಡ

BJP General Secretary Aswath Narayan Gowda
ಬಿಜೆಪಿ ಪ್ರಧಾನ ಕಾರ್ಯದರ್ಶಿಅಶ್ವಥ್ ನಾರಾಯಣ್ ಗೌಡ

By

Published : Jan 10, 2023, 7:28 PM IST

ಸಿಡಿ ಇಟ್ಕೊಂಡ್ ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದರೆಂದು ಕುಮಾರಸ್ವಾಮಿ ವಿರುದ್ದ ಆಕ್ರೋಶ

ನೆಲಮಂಗಲ (ರಾಮನಗರ): ಸ್ಯಾಂಟ್ರೋ ರವಿ ಹೆಣ್ಣು ಮಕ್ಕಳನ್ನು ಇಟ್ಕೊಂಡ್ ದಂಧೆ ನಡೆಸಿದ ಬಿಡಿ, ಆದರೆ ಕುಮಾರಸ್ವಾಮಿ, ಸಿಡಿ ಇಟ್ಕೊಂಡ್ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರಾ ಹಾಗಾದರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ವಕ್ತಾರ ಅಶ್ವತ್ಥ ನಾರಾಯಣ್ ಗೌಡ ಕುಮಾರಸ್ವಾಮಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ನೂರಾರು ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ಎರಡು ವರ್ಷಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡಿದ್ದಾರೆ. ಕೋವಿಡ್ ಸಂಕಷ್ಟದ ನಡುವೆ ಉತ್ತಮ ಸರ್ಕಾರ ನೀಡುವ ಯತ್ನ ಮಾಡಿದ್ದಾರೆ ಎಂದು ಅಶ್ವತ್ಧ ನಾರಾಯಣಗೌಡ ಹೇಳಿದ್ದಾರೆ. ಕೇಂದ್ರ ಸರ್ಕಾರ 80 ಕೋಟಿ ಜನಕ್ಕೆ ಉಚಿತ ಪಡಿತರ ನೀಡಿದೆ. ಇನ್ನು ರಾಮನಗರದಲ್ಲಿ ಶಾಶ್ವತ ನೀರಾವರಿ ಯೋಜನೆ ನೀಡಿದ್ದು ನಮ್ಮದೇ ಸರ್ಕಾರ ಎಂದು ಬಿಜೆಪಿ ವಕ್ತಾರರು ಸರ್ಕಾರದ ಸಾಧನೆಯನ್ನು ಕೊಂಡಾಡಿದರು.

ಇದೇ ವೇಳೆ ಆಶ್ವತ್ಥ ನಾರಾಯಣಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ಗೆ ಟಾಂಗ್ ಕೊಟ್ಟರು. ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಕಳೆದು ಹತ್ತು ವರ್ಷಗಳಿಂದ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸಂಪರ್ಕದಲ್ಲಿದ್ದಾರೆ. ನಮ್ಮ ಪಕ್ಷ ಆತನ ವಿರುದ್ಧ ಎಫ್​ಐಆರ್​ ಹಾಕಿದೆ. ಅಪಾದನೆಯಲ್ಲ ನಮ್ಮ ಸರ್ಕಾರದ ಮೇಲೆ ಹೊರಸಿದ್ದಾರೆ. ಆದರೆ ಕೊನೆಯದಾಗಿ ಕಾಂಗ್ರೆಸ್​ನವರೇ ಈ ಕೇಸ್​​​ನಲ್ಲಿ ಸಿಕ್ಕಕೊಳ್ಳೊದು ಎಂದು ವ್ಯಂಗ್ಯವಾಡಿದರು.

ಇದೇ ವೇಳೆ, ರಾಮನಗರ ಜಿಲ್ಲೆಯಲ್ಲೇ ಕಮಲ ಅರಳಲಿದೆ ಎಂದು ಅಶ್ವತ್ಥ ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿ ಹಲವಾರು ಪಕ್ಷದಲ್ಲಿ ಹಲವರು ಟಿಕೆಟ್​ ಆಕಾಂಕ್ಷಿಗಳಿದ್ದಾರೆ, ಇವರನ್ನೆಲ್ಲ ನೋಡಿದರೆ ಸಾಕು ಬಿಜೆಪಿ ಜಿಲ್ಲೆಯಲ್ಲಿ ಪ್ರಬಲವಾಗಿದೆ ಎಂಬುದನ್ನು ತೋರಿಸುತ್ತಿದೆ. ಮುಂದಿನ ದಿನಗಳಲ್ಲಿ ಮಾಗಡಿ ಕ್ಷೇತ್ರದಲ್ಲಿ ಎಂ.ಜಿ.ರಂಗಧಾಮಯ್ಯ ಹೊಸ ಅಭಿವೃದ್ಧಿ ಪರ್ವ ಮಾಡಲಿದ್ದಾರೆ ಎಂದು ಬಿಜೆಪಿ ವಕ್ತಾರರು ಭರವಸೆ ನೀಡಿದರು.

ಮತ್ತೊಂದೆಡೆ ಬೀದರ್​​ನಲ್ಲಿ ಪಂಚರತ್ನ ಯಾತ್ರೆ ವೇಳೆ ಮಾತನಾಡಿದ್ದ ಕುಮಾರಸ್ವಾಮಿ ರಾಜ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೇಂದ್ರ ಗೃಹಮಂತ್ರಿ ಅಮಿತ್​​​ ಶಾ ಮತ್ತು ಜೆ.ಪಿ.ನಡ್ಡಾ ರಾಜ್ಯಕ್ಕೆ ಬಂದರೆ ಯಾವ ಹೋಟೆಲ್​ನಲ್ಲಿ ಹಾಲ್ಟ್​ ಮಾಡೋದು ಎಂದು ಪ್ರಶ್ನೆ ಮಾಡಿದ್ದರು. ಇವರು ಮೀಟಿಂಗ್ ​ಮಾಡುತ್ತಾರಲ್ಲ ಯಾವ ಹೋಟೆಲ್​ನಲ್ಲಿ ಗೊತ್ತಾ, ಅಮೀತ್​ ಶಾ ಮೊನ್ನೆ ಮಂಡ್ಯಕ್ಕೆ ಬಂದಿದ್ದರಲ್ಲ ಆ ಸಂದರ್ಭದಲ್ಲಿ ಎಲ್ಲಿ ಇದ್ರು ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದರು.

ಹೆಚ್​ಡಿ ಕುಮಾರಸ್ವಾಮಿ ಸಿಎಂ ಇದ್ದಾಗ ತಾಜ್​ ವೆಸ್ಟ್​ ಎಂಡ್​ನಲ್ಲಿ ಕಾಲಕಳೆದು ಹೋಗಿದ್ದರು ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಗರಂ ಆಗಿದ್ದ ಕುಮಾರಸ್ವಾಮಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ನನಗೆ ಸರ್ಕಾರಿ ನಿವಾಸ ದೊರಕದ ಹಿನ್ನೆಲೆಯಲ್ಲಿ ಹೋಟೆಲ್​​​ನಲ್ಲಿ ಉಳಿದುಕೊಂಡಿದ್ದೆ, ಸಿದ್ದರಾಮಯ್ಯ ಸಿಎಂ ಅಧಿಕೃತ ನಿವಾಸವನ್ನು ತೆರವು ಮಾಡಿರಲಿಲ್ಲ. ಹಾಗಾಗಿ ನಾನು ತಾಜ್​ ವೆಸ್ಟ್​ ಎಂಡ್​ನಲ್ಲಿ ಉಳಿದುಕೊಂಡಿದ್ದೆ ಎಂದು ಸ್ಪಷ್ಟನೆಯನ್ನೂ ಕೊಟ್ಟಿದ್ದರು.

ಇದನ್ನೂ ಒಂದು :ಹೆಚ್​ಡಿಕೆ ಅವರನ್ನ ವೇಶ್ಯೆಗೆ ಹೋಲಿಕೆ ಮಾಡಿದ ಎಸ್​ಟಿ ಸೋಮಶೇಖರ್: ಕುಮಾರಸ್ವಾಮಿ ಕಿಡಿ

ABOUT THE AUTHOR

...view details