ಕರ್ನಾಟಕ

karnataka

ETV Bharat / state

ಮೇಕೆದಾಟು ಪಾದಯಾತ್ರೆ: ಡಿಕೆಶಿ ಸೇರಿ 64 ಮಂದಿ ವಿರುದ್ಧ ಮೂರನೇ ಎಫ್​ಐಆರ್ ದಾಖಲು - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮೇಲೆ ಮತ್ತೊಂದು ಎಫ್​ಐಆರ್​

ಮೇಕೆದಾಟು ಪಾದಯಾತ್ರೆ ವೇಳೆ ಕೋವಿಡ್​ ನಿಯಮಾವಳಿ ಉಲ್ಲಂಘಿಸಿದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಸೇರಿದಂತೆ 64 ಮಂದಿಯ ವಿರುದ್ಧ ಮೂರನೇ ಎಫ್​ಐಆರ್​​ ದಾಖಲಿಸಲಾಗಿದೆ.

Another FIR registered against State Congress president DK Shivakumar and 63 others
ಡಿಕೆಶಿ ಸೇರಿ 63 ಮಂದಿ ವಿರುದ್ಧ ಮೂರನೇ ಎಫ್​ಐಆರ್ ದಾಖಲು

By

Published : Jan 12, 2022, 11:15 AM IST

Updated : Jan 12, 2022, 1:30 PM IST

ಬೆಂಗಳೂರು: ಕಾಂಗ್ರೆಸ್​ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವೇಳೆ ಕೋವಿಡ್​ ನಿಯಮಾವಳಿ ಉಲ್ಲಂಘಿಸಿದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಸೇರಿದಂತೆ 64 ಮಂದಿಯ ವಿರುದ್ಧ ಮೂರನೇ ಎಫ್​ಐಆರ್​​ ದಾಖಲಾಗಿದೆ.

ಎಫ್​ಐಆರ್​ ಪ್ರತಿ

ಈ ಹಿಂದೆ ನಿನ್ನೆ 38 ಮಂದಿಯ ವಿರುದ್ಧ ಎರಡನೇ ಎಫ್​ಐಆರ್​ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ ಡಿಕೆಶಿ, ಸಿದ್ದರಾಮಯ್ಯ ಸೇರಿದಂತೆ 31 ಮಂದಿಯ ವಿರುದ್ಧ ಕೋವಿಡ್​ ನಿಯಮಾವಳಿ ಉಲ್ಲಂಘಿಸಿದ ಆರೋಪದ ಮೇಲೆ ಸೋಮವಾರ ರಾಮನಗರದ ಸಾತನೂರು ಪೊಲೀಸರು ಎಫ್​ಐಆರ್​ ದಾಖಲು ಮಾಡಿದ್ದರು.

ಎಫ್​ಐಆರ್​ ಪ್ರತಿ

ಮೂರನೇ ಎಫ್​ಐಆರ್​ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಸಂಸದ ಡಿ.ಕೆ. ಸುರೇಶ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್​ ಸದಸ್ಯ ಎಸ್​. ರವಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್​, ಶಾಸಕ ಪ್ರಿಯಾಂಕ್​ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ತನ್ವೀರ್​ ಸೇಠ್​, ವಿಧಾನ ಪರಿಷತ್​ ಸದಸ್ಯ ಸಲೀಂ ಅಹಮದ್​, ಶಾಸಕ ಯತೀಂದ್ರ ಸಿದ್ದರಾಮಯ್ಯ ಸೇರಿ 64 ಮಂದಿಯ ಹೆಸರನ್ನೊಳಗೊಂಡಿದೆ.

ಎಫ್​ಐಆರ್​ ಪ್ರತಿ

ಕೊರೊನಾ ನಿಯಮ ಉಲ್ಲಂಘನೆ ಆರೋಪದ ಮೇಲೆ ಕನಕಪುರ ನಗರ​ ಪೊಲೀಸ್​ ಠಾಣೆಯಲ್ಲಿ ಕನಕಪುರದ ತಹಸೀಲ್ದಾರ್ ಅವರು ದೂರು ನೀಡಿದ್ದು, ಎಫ್​ಐಆರ್​​ ದಾಖಲಿಸಿಕೊಳ್ಳಲಾಗಿದೆ.

ಇದನ್ಣೂ ಓದಿ:Pm Security Breach: ಪ್ರಧಾನಿ ಭದ್ರತಾ ಲೋಪ ಕುರಿತಂತೆ ಸುಪ್ರೀಂನಿಂದ ಹೊಸ ಸಮಿತಿ ನೇಮಕ

Last Updated : Jan 12, 2022, 1:30 PM IST

ABOUT THE AUTHOR

...view details