ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಮತ್ತೊಂದು ಕೊರೊನಾ ಪ್ರಕರಣ​...ಸೋಂಕಿತೆಗೆ 'ವಿಕ್ಟೋರಿಯಾ' ಲಿಂಕ್​​ - corona news

ಚನ್ನಪಟ್ಟಣ ತಾ. ಎಲೆತೋಟದ ಹಳ್ಳಿಯ 65 ವರ್ಷದ ವೃದ್ಧೆಗೆ ಸೋಂಕು ತಗುಲಿದ್ದು, ಕಳೆದ 10 ದಿನಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇತರೆ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದರು. ಸೋಂಕು ಅಲ್ಲಿಂದಲೇ ತಗುಲಿದೆ ಎಂದು ಶಂಕಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಕೊರೊನಾ
ಕೊರೊನಾ

By

Published : Jun 7, 2020, 10:43 PM IST

Updated : Jun 7, 2020, 11:33 PM IST

ರಾಮನಗರ:ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್-19 ಪ್ರಕರಣ ಪತ್ತೆಯಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ಚನ್ನಪಟ್ಟಣ ತಾ. ಎಲೆತೋಟದ ಹಳ್ಳಿಯ 65 ವರ್ಷದ ವೃದ್ಧೆಗೆ ಸೋಂಕು ತಗುಲಿದ್ದು, ಕಳೆದ 10 ದಿನಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇತರೆ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದರು. ಸೋಂಕು ಅಲ್ಲಿಂದಲೇ ತಗುಲಿದೆ ಎಂದು ಶಂಕಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಜಿಲ್ಲೆಯ ಮೊದಲ‌ ಪ್ರಕರಣವಾಗಿದ್ದ ಮಾಗಡಿ ಕುದೂರು ಬಳಿಯ ಸಂಕಿ ಘಟ್ಟ ಪ್ರಾಥಮಿಕ‌ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮದಲ್ಲಿ, ಎರಡೂವರೆ ವರ್ಷದ ಮಗುವಿಗೆ ಕೊರೊನಾ ಸೋಂಕು ತಗುಲಿತ್ತು. ಇದೀಗ ಮಗುವಿಗೆ‌ ಕೊರೊನಾ‌ ಟೆಸ್ಟ್​ ಮಾಡಿದಾಗ ನೆಗೆಟಿವ್ ಬಂದಿದೆ.

ಜಿಲ್ಲೆಯ‌ಲ್ಲಿ ಕೊರೊನಾ‌ ಗೆದ್ದು ಬಂದ ಮೊದಲ‌ ಮಗು‌ ಇದಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ಜಿಲ್ಲೆಯಲ್ಲಿ ನಾಲ್ಕು ಕೋವಿಡ್-19 ಪ್ರಕರಣಗಳು ಸಕ್ರಿಯವಾಗಿವೆ.

Last Updated : Jun 7, 2020, 11:33 PM IST

ABOUT THE AUTHOR

...view details