ಕರ್ನಾಟಕ

karnataka

By

Published : Mar 7, 2020, 7:45 PM IST

ETV Bharat / state

ಹಸಿರು ಶಾಲು ಹಾಕ್ಕೊಂಡು ಬಜೆಟ್​​ ಮಂಡನೆ ಮಾಡಿದ್ರೂ ಅದು ರೈತಪರವಾಗಿಲ್ಲ: ಅನಿತಾ ಕುಮಾರಸ್ವಾಮಿ

ಬಜೆಟ್ ಮಂಡಿಸುವಾಗ ಹಸಿರು ಶಾಲು ಹಾಕಿಕೊಂಡಿದ್ದರು. ಆದರೆ ಬಜೆಟ್ ಮಾತ್ರ ರೈತರ ಪರವಾಗಿಲ್ಲ. ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇದ್ರೆ ಕೈಬಿಟ್ಟಿರುವ ಯೋಜನೆಗಳನ್ನ ಮುಂದುವರೆಸಲಿ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪನವರಿಗೆ ಶಾಸಕಿ ಅನಿತಾಕುಮಾರಸ್ವಾಮಿ ಆಗ್ರಹಿಸಿದರು.

anitha-kumaraswamy-reaction-on-bsy-budget
ಅನಿತಾ ಕುಮಾರಸ್ವಾಮಿ

ರಾಮನಗರ:ರಾಜ್ಯ ಬಜೆಟ್​​​ನಲ್ಲಿ ಹೆಚ್​ಡಿಕೆ ಯೋಜನೆಗಳಿಗೆ ಬ್ರೇಕ್ ಬಿದ್ದಿರುವ ವಿಚಾರಕ್ಕೆ ಸಿಎಂ ಯಡಿಯೂರಪ್ಪ ವಿರುದ್ಧ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಯಡಿಯೂರಪ್ಪನವರು ರೈತರ ಪರ ಅಂತಾ ಹೇಳುತ್ತಾರೆ. ಆದರೆ ಬಜೆಟ್​ನಲ್ಲಿ ರೈತರಿಗಾಗಿ ಇದ್ದ ಯೋಜನೆಗಳಿಗೆ ಬ್ರೇಕ್ ಹಾಕಿದ್ದಾರೆ. ಕುಮಾರಸ್ವಾಮಿಯವರಿಗಾಗಿ ಅಲ್ಲದಿದ್ದರು ರೈತರಿಗಾಗಿ ಮುಂದುವರೆಸಬಹುದಿತ್ತು ಎಂದರು.

ಪ್ರಮುಖವಾಗಿ ರೈತರ ಸಾಲಮನ್ನಾ ಯೋಜನೆಯನ್ನ ಕೈಬಿಟ್ಟಿದ್ದಾರೆ, ಅದು ಸರಿಯಲ್ಲ ಅನ್ನೋದು ನನ್ನ ಭಾವನೆ. ಬಜೆಟ್ ಮಂಡಿಸುವಾಗಲೂ ಹಸಿರು ಶಾಲು ಹಾಕಿಕೊಂಡಿದ್ದರು. ಆದರೆ ಬಜೆಟ್ ಮಾತ್ರ ರೈತರ ಪರವಾಗಿಲ್ಲ. ಹಾಗಾಗಿ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇದ್ರೆ ಕೈಬಿಟ್ಟಿರುವ ಯೋಜನೆಗಳನ್ನ ಮುಂದುವರೆಸಲಿ ಎಂದು ಸಿಎಂಗೆ ಅನಿತಾ ಕುಮಾರಸ್ವಾಮಿ ಆಗ್ರಹಿಸಿದರು.

ಬಜೆಟ್​ ಕುರಿತು ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯೆ

ಸಿಂಪಲ್ ಆಗಿ ನಿಖಿಲ್ ಮದುವೆ

ನಾವೇನು ಸಾವಿರಾರು ರೂಪಾಯಿ ಕೊಟ್ಟು ಆಹ್ವಾನ ಪತ್ರಿಕೆ ಪ್ರಿಂಟ್ ಮಾಡಿಸಿಲ್ಲ. ನಮ್ಮ ಜನಗಳ ಮಧ್ಯೆ ಮದುವೆ ಮಾಡಬೇಕೆಂಬ ಅಭಿಪ್ರಾಯ ಅಷ್ಟೇ. ಯಾರಿಗೂ ಗಿಫ್ಟ್ ನೀಡುತ್ತಿಲ್ಲ. ಅದೆಲ್ಲಾ ಸುಳ್ಳು. ನಿಖಿಲ್ ಮದುವೆ ಸಿಂಪಲ್ ಇರುತ್ತೆ. ಬೆಂಗಳೂರಿನ ಬದಲಾಗಿ ಜಿಲ್ಲೆಯಲ್ಲೇ ಮಾಡ್ತಿದ್ದೀವಿ ಅಷ್ಟೇ. ಅದರಲ್ಲೇನೂ ವಿಶೇಷ ಇಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ABOUT THE AUTHOR

...view details