ರಾಮನಗರ : ಜಿಲ್ಲೆಯ ಹೆಸರು ಬದಲಾವಣೆ ಮಾಡುವುದರಿಂದ ಯಾವುದೇ ಲಾಭವಿಲ್ಲ ಎನ್ನುವುದನ್ನು ಸರ್ಕಾರ ನಡೆಸುವವರು ಅರ್ಥ ಮಾಡಿಕೊಳ್ಳಬೇಕು ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ಅನುದಾನವನ್ನು ತಡೆಹಿಡಿದಿರುವ ಸರ್ಕಾರ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಆಗ್ರಹಿಸಿದರು.
ರಾಮನಗರ ಜಿಲ್ಲೆ ಹೆಸರು ಬದಲಾವಣೆ ಬೇಡ.. ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ
ಕುಮಾರಸ್ವಾಮಿಯವರು 13 ವರ್ಷಗಳ ಹಿಂದೆ ತಾಲೂಕು ಕೇಂದ್ರವಾಗಿದ್ದ ರಾಮನಗರವನ್ನು ಜಿಲ್ಲೆಯಾಗಿ ಮಾಡಿದರು. ರಾಮನಗರ ಎನ್ನುವ ಹೆಸರು ಜನರು ಮತ್ತು ನಮ್ಮ ಮನಸ್ಸಿಗೆ ಹತ್ತಿರವಾದ ಹೆಸರು. ಅದಕ್ಕೆ ಜಗತ್ತೇ ಮಚ್ಚಿದೆ. ಅವರು ರಾಮನ ಭಕ್ತರು, ನಾವು ಹನುಮನ ಭಕ್ತರು. ಹಾಗಾಗಿ ಜಲ್ಲೆಯ ಹೆಸರು ಬದಲಾವಣೆ ಮಾಡಬಾರದು. ರಾಮನಗರ ಜಿಲ್ಲೆಯಾಗೇ ಮುಂದುವರೆಯಬೇಕು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಆಗ್ರಹಿಸಿದರು.
ತಾಲೂಕಿನ ಕೈಲಾಂಚ ಗ್ರಾಮದಲ್ಲಿ ಸೋಮವಾರ ನಡೆದ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕ್ಷೇತ್ರದ ಜನರು ನನ್ನ ಪತಿ ಕುಮಾರಸ್ವಾಮಿ ಮತ್ತು ನಮ್ಮ ಕುಟುಂಬದ ಮೇಲಿಟ್ಟಿರುವ ವಿಶ್ವಾಸಕ್ಕೆ ನಾವು ಚಿರಋಣಿ. ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಎನ್ನುವುದು ನನ್ನ ಆಸೆ. ಆದರೆ, ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡ ಮೇಲೆ ಬಿಜೆಪಿ ಸರ್ಕಾರ ತಡೆಹಿಡಿದಿದ್ದ ಅನುದಾನ ಮತ್ತೆ ತರುವ ಪ್ರಯತ್ನದಲ್ಲಿದ್ದೇನೆ, ನಮ್ಮ ಮೇಲೆ ವಿಶ್ವಾಸವಿಡಿ ಎಂದರು.
ಇದೇ ವೇಳೆ ಕುಮಾರಸ್ವಾಮಿಯವರು 13 ವರ್ಷಗಳ ಹಿಂದೆ ತಾಲೂಕು ಕೇಂದ್ರವಾಗಿದ್ದ ರಾಮನಗರವನ್ನು ಜಿಲ್ಲೆಯಾಗಿ ಮಾಡಿದರು. ರಾಮನಗರ ಎನ್ನುವ ಹೆಸರು ಜನರು ಮತ್ತು ನಮ್ಮ ಮನಸ್ಸಿಗೆ ಹತ್ತಿರವಾದ ಹೆಸರು. ಅದನ್ನ ಜಗತ್ತೇ ಮಚ್ಚಿದೆ. ಅವರು ರಾಮನ ಭಕ್ತರು, ನಾವು ಹನುಮನ ಭಕ್ತರು. ಹಾಗಾಗಿ ಜಲ್ಲೆಯ ಹೆಸರು ಬದಲಾವಣೆ ಮಾಡಬಾರದು. ರಾಮನಗರ ಜಿಲ್ಲೆಯಾಗೇ ಮುಂದುವರೆಯಬೇಕು ಎಂದು ಒತ್ತಾಯಿಸಿದ ಅವರು, ಮುಖ್ಯಮಂತ್ರಿಗಳು ಮರು ನಾಮಕರಣ ಪ್ರಸ್ತಾವನೆ ಇದೆ. ಆದರೆ, ನಿರ್ಧಾರ ಮಾಡಿಲ್ಲ ಎಂದಿದ್ದಾರೆ. ಸರ್ಕಾರ ಹೆಸರು ಬದಲಾವಣೆ ಮಾಡುವುದಿಲ್ಲ ಎಂಬ ಬಗ್ಗೆ ನನಗೆ ವಿಶ್ವಾಸವಿದೆ ಎಂದು ತಿಳಿಸಿದರು.