ಕರ್ನಾಟಕ

karnataka

ETV Bharat / state

ಕಾರಿಗೆ ಕೂಲಿಂಗ್ ಪೇಪರ್ : ಅಧಿಕಾರಿಯಿಂದಲೇ ನಿಯಮ ಉಲ್ಲಂಘನೆ - ರಾಮನಗರ ಜಿಲ್ಲಾ ಪಂಚಾಯತ್ ಸಿಇಒ ಇಕ್ರಂ

ರಾಮನಗರ ಜಿಲ್ಲಾ ಪಂಚಾಯತ್ ಸಿಇಒ ಪುಲ್ ಟಿಂಟೆಡ್ ಕೂಲಿಂಗ್ ಗ್ಲಾಸ್ ಅನ್ನು ತಮ್ಮ ಇನ್ನೋವಾ ಕ್ರಿಸ್ಟಾ ಕಾರ್​ಗೆ ಬಳಸಿ ಕಾನೂನು ಗಾಳಿಗೆ ತೂರಿದ್ದಾರೆ. ಆದರೂ ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವ ಚರ್ಚೆ ಆರಂಭವಾಗಿದೆ.

an-officer-applies-cooling-paper-to-car
an-officer-applies-cooling-paper-to-car

By

Published : Feb 20, 2020, 7:26 PM IST

ರಾಮನಗರ:ವಾಹನಗಳಿಗೆ ಕೂಲಿಂಗ್ ಪೇಪರ್ ಅಳವಡಿಸದಂತೆ ಸುಪ್ರೀಂಕೋರ್ಟ್ ಆದೇಶವಿದೆ. ಆದರೆ ಕಾನೂನು ಪಾಲಿಸಬೇಕಾದ ಅಧಿಕಾರಿಯೊಬ್ಬರು ತಮ್ಮ ಸರ್ಕಾರಿ ಕಾರಿಗೆ ಕೂಲಿಂಗ್ ಪೇಪರ್ ಅಳವಡಿಸಿಕೊಂಡಿರುವುದು ಟೀಕೆಗೆ ಗುರಿಯಾಗಿದೆ.

ರಾಮನಗರ ಜಿಲ್ಲಾ ಪಂಚಾಯತ್ ಸಿಇಒ ಪುಲ್ ಟಿಂಟೆಡ್ ಕೂಲಿಂಗ್ ಗ್ಲಾಸ್ ಅನ್ನು ತಮ್ಮ ಇನ್ನೋವಾ ಕ್ರಿಸ್ಟಾ ಕಾರ್​ಗೆ ಬಳಸಿ ಕಾನೂನನ್ನು ಗಾಳಿಗೆ ತೂರಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೇ ರಾಮನಗರ ಜಿಲ್ಲಾ ಪಂಚಾಯತ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಅಧಿಕಾರಿ ಈ ಹಿಂದಿನ ಸಿಇಒ ಬಳಸುತ್ತಿದ್ದ ಮಾರುತಿ ಏರ್ಟಿಗಾ ಕಾರಿಗೆ ವಿದಾಯ ಹೇಳಿ, ಹೊಸ ಇನ್ನೋವಾ ಕ್ರಿಸ್ಟಾ ಕಾರು ಖರೀದಿ ಮಾಡಿದ್ದರು, KA.42 G.2000 ನಂಬರಿನ ಕಾರಿಗೆ ಸಂಪೂರ್ಣ ಕೂಲಿಂಗ್ ಪೇಪರ್ ಹಾಕಿಸಿಕೊಂಡಿದ್ದು ಕಾನೂನು ಉಲ್ಲಂಘನೆಯಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳಿಗೆ ಒಂದು ಕಾನೂನು ಜನ ಸಾಮಾನ್ಯರಿಗೆ ಮತ್ತೊಂದು ಕಾನೂನೇ ಎನ್ನುವಂತಾಗಿದೆ.

ಸಾಮಾನ್ಯ ಜನರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ರೆ ಫೈನ್ ಹಾಕುವ ಆರ್​ಟಿಒ ಅಧಿಕಾರಿಗಳು ಹಾಗೂ ಪೊಲೀಸ್​ ಇಲಾಖೆ ಸಿಬ್ಬಂದಿ, ಸುಪ್ರೀಂಕೋರ್ಟ್ ಅದೇಶ ಉಲ್ಲಂಘನೆ ಮಾಡಿ ಕೂಲಿಂಗ್ ಟಿಂಟ್ ಅಳವಡಿಸಿರುವ ಕಾರು ಬಳಸುತ್ತಿದ್ದರೂ ಜಿಲ್ಲಾ ಪಂಚಾಯತ್ ಸಿಇಒ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವ ಚರ್ಚೆ ಆರಂಭವಾಗಿದೆ.

ABOUT THE AUTHOR

...view details