ಕರ್ನಾಟಕ

karnataka

ETV Bharat / state

ಗಣೇಶ ಹಬ್ಬದಂದೇ ವಿದ್ಯುತ್​ ಸ್ಪರ್ಶಿಸಿ ಆನೆ ಸಾವು - ರಾಮನಗರ ಸುದ್ದಿ

ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅರಣ್ಯ ವಲಯದ ಮಲ್ಲಂಗೆರೆ ಗ್ರಾಮದ ಎನ್.ಆರ್. ಕಾಲೋನಿ ಬಳಿ 35 - 40 ವರ್ಷದ ಗಂಡಾನೆಯು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ.

elephant
ವಿದ್ಯುತ್​ ಸ್ಪರ್ಶಿಸಿ ಆನೆ ಸಾವು

By

Published : Sep 10, 2021, 11:40 AM IST

ರಾಮನಗರ: ಗಣೇಶ ಹಬ್ಬದ ದಿನವೇ 35 - 40 ವರ್ಷದ ಗಂಡಾನೆಯು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ. ಈ ಘಟನೆ ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅರಣ್ಯ ವಲಯದ ಮಲ್ಲಂಗೆರೆ ಗ್ರಾಮದ ಎನ್.ಆರ್. ಕಾಲೋನಿ ಬಳಿ ತೋಟದಲ್ಲಿ ನಡೆದಿದೆ.

ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಗಜಪಡೆಯಲ್ಲಿ ಈ ಆನೆಗೆ ವಿದ್ಯುತ್​ ತಂತಿ ತಗುಲಿದೆ. ಪರಿಣಾಮ ನೋವಿನಿಂದ ಕಿರುಚಿದ್ದು, ಈ ಸಂದರ್ಭದಲ್ಲಿ ಇತರ ಆನೆಗಳು ಪಲಾಯನ ಮಾಡಿವೆ. ಕಳೆದ ತಿಂಗಳು ಸಹ ಕಬ್ಬಾಳು ಅರಣ್ಯದಲ್ಲಿ 35 ವರ್ಷದ ಗಂಡಾನೆ ಮೃತಪಟ್ಟಿತ್ತು.

ಸದ್ಯ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ಸಂಸ್ಕಾರ ಕೂಡ ಮಾಡಲಿದ್ದಾರೆ.

ABOUT THE AUTHOR

...view details