ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ನಡುವೆಯೂ ರಾಮನಗರದಲ್ಲಿ ಮತಾಂತರದ ಆರೋಪ - Arashinakunte village

ಕೆಲ ಕಾಲ ಗೊಂದಲ ಉಂಟಾಗಿದ್ದರ ಪರಿಣಾಮ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಿದ್ದಾರೆ‌..

Allegations of conversion in Ramanagara
ರಾಮನಗರದಲ್ಲಿ ಮತಾಂತರ

By

Published : Jul 12, 2020, 8:32 PM IST

ರಾಮನಗರ :ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿ ಅರಶಿನಕುಂಟೆ ಗ್ರಾಮದಲ್ಲಿ ಮತಾಂತರ ಆರೋಪ ಕೇಳಿ ಬಂದಿದೆ.

ಲಾಕ್​ಡೌನ್​​ ನಿಷೇಧದ ನಡುವೆಯೂ ಮಾರುತಿ ಓಮ್ನಿ ಕಾರಿನಲ್ಲಿ ಅರಶಿನಕುಂಟೆ ಗ್ರಾಮಕ್ಕೆ ಬಂದ ಗುಂಪೊಂದು ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅರಶಿನಕುಂಟೆ ಗ್ರಾಮದ ಲಕ್ಷ್ಮಮ್ಮ ಎಂಬುವರ ಮನೆಗೆ ಕನ್ನಸಂದ್ರದಿಂದ ಬಂದಿದ್ದ ಆ ಗುಂಪು ಮತಾಂತರಕ್ಕೆ ಯತ್ನಿಸಿದೆ ಎನ್ನಲಾಗಿದೆ. ಕಾಂತರಾಜು, ನರಸಿಂಹಯ್ಯ, ಸಂತೋಷ್, ಸುಜಾತ, ಅನುಮಕ್ಕ, ರಾಜಲಕ್ಷ್ಮಿ, ಧನಲಕ್ಷ್ಮಿ ಎಂಬುವರ ವಿರುದ್ಧ ಆರೋಪ ಬಂದಿದೆ.

ರಾಮನಗರದಲ್ಲಿ ಮತಾಂತರದ ಆರೋಪ

ಕೆಲ ಕಾಲ ಗೊಂದಲ ಉಂಟಾಗಿದ್ದರ ಪರಿಣಾಮ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಿದ್ದಾರೆ‌. ಮಾಗಡಿ ತಾಲೂಕಿನ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ABOUT THE AUTHOR

...view details