ರಾಮನಗರ: ಬೈಕ್ಗೆ ಖಾಸಗಿ ಗಾರ್ಮೆಂಟ್ಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವತಿವೋರ್ವಳು ಸಾವನ್ನಪ್ಪಿದ್ದಾಳೆ. ಬೈಕ್ನಲ್ಲಿದ್ದ ಮತ್ತೋರ್ವ ಯುವತಿ ಸ್ಥಿತಿ ಗಂಭೀರವಾಗಿದೆ. ಜಿಲ್ಲಾಧಿಕಾರಿ ಕಚೇರಿ ಬಳಿ ಈ ಘಟನೆ ಸಂಭವಿಸಿದೆ.
ಬೈಕ್ಗೆ ಗಾರ್ಮೆಂಟ್ಸ್ ವಾಹನ ಡಿಕ್ಕಿ... ಯುವತಿ ಸಾವು, ಮತ್ತೋರ್ವಳ ಸ್ಥಿತಿ ಗಂಭೀರ - accident in ramanagara
ಬೈಕ್ಗೆ ಖಾಸಗಿ ಗಾರ್ಮೆಂಟ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವತಿವೋರ್ವಳು ಸಾವನ್ನಪ್ಪಿದ್ದು, ಇನ್ನೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ರಾಮನಗರ ಜಿಲ್ಲಾಧಿಕಾರಿ ಕಚೇರಿ ಬಳಿ ದುರ್ಘಟನೆ ಸಂಭವಿಸಿದೆ.
ಬೈಕ್ಗೆ ಗಾರ್ಮೆಂಟ್ಸ್ ವಾಹನ ಡಿಕ್ಕಿ...ಯುವತಿ ಸಾವು, ಮತ್ತೊಬ್ಬರು ಗಂಭೀರ!
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಪಘಾತ ನಡೆದಿದ್ದು, ಮೃತ ಯುವತಿಯ ವಿವರ ತಿಳಿದು ಬಂದಿಲ್ಲ. ಇನ್ನೋರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಹೆದ್ದಾರಿಯಲ್ಲಿ ಅನಧಿಕೃತ ರಸ್ತೆ ಉಬ್ಬು ಹಾಕಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ. ರಾಮನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.