ಕರ್ನಾಟಕ

karnataka

ETV Bharat / state

ಮಾನವೀಯತೆಗೆ ಮಾದರಿ: ಕೋವಿಡ್​​​ ಶವಗಳಿಗೆ ಮುಕ್ತಿ ನೀಡುವ ಕರುಣಾಮಯಿ ಮಹಿಳೆ - ಆಶಾ.ವಿ ಸ್ವಾಮಿ

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರೇ ಹಿಂದೇಟು ಹಾಕುವ ಪರಿಸ್ಥಿತಿ ಬಂದೊದಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಶಾ ಅವರೇ ಮುಂದೆ ಬಂದು ಯಾವುದೇ ಭಯವಿಲ್ಲದೆ ಪಿಪಿಇ ಕಿಟ್​ ಧರಿಸಿ ಶವಗಳಿಗೆ ಮುಕ್ತಿ ನೀಡುತ್ತಿದ್ದಾರೆ.

a-women-who-doing-funeral-for-who-died-from-corona-infection
ಕೋವಿಡ್​​​ ಶವಗಳಿಗೆ ಮುಕ್ತಿ ನೀಡುವ ಕರುಣಾಮಯಿ

By

Published : Apr 29, 2021, 5:36 PM IST

ರಾಮನಗರ:ಕೊರೊನಾ ಪಾಸಿಟಿವ್​ ಬಂದಿದೆ ಎಂದರೆ ನೂರು ಮೈಲಿ ದೂರ ನಿಂತುಕೊಳ್ಳುವ ಜನರ ನಡುವೆ ಇಲ್ಲೊಬ್ಬಳು ಮಹಿಳೆ ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕೊರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವ ಈ ಮಹಿಳೆಯ ಹೆಸರು ಆಶಾ.ವಿ ಸ್ವಾಮಿ, ರಾಮನಗರ ನಿವಾಸಿಯಾಗಿರುವ ಇವರು, ತಮ್ಮದೇ ಆದ ಜೀವರಕ್ಷಾ ಚಾರಿಟಬಲ್ ಟ್ರಸ್ಟ್ ಮೂಲಕ ಹಲವು‌ ಸಾಮಾಜಿಕ ಕಾರ್ಯಗಳನ್ನ ಮಾಡಿಕೊಂಡು ಬರುತ್ತಿದ್ದಾರೆ. ಈ ಮೊದಲು‌ ಎಲ್ಲಾದರೂ ಅನಾಥ ಶವಗಳು ಕಂಡು ಬಂದರೆ ಇವರು ಶವಸಂಸ್ಕಾರ ಮಾಡುವ ಕಾಯಕ ರೂಢಿಸಿಕೊಂಡು ಬಂದಿದ್ದಾರೆ.

ಕೋವಿಡ್​​​ ಶವಗಳಿಗೆ ಮುಕ್ತಿ ನೀಡುವ ಕರುಣಾಮಯಿ ಮಹಿಳೆ

ಕಳೆದ 5 ವರ್ಷಗಳ ಹಿಂದೆ ಸ್ಥಾಪಿತವಾದ ಈ ಟ್ರಸ್ಟ್ ಮೂಲಕ‌ ಸರಿ ಸುಮಾರು 2 ಸಾವಿರಕ್ಕೂ ಹೆಚ್ಚು ಅನಾಥ ಶವಗಳನ್ನ ಅಂತ್ಯಸಂಸ್ಕಾರ ಮಾಡುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

10ಕ್ಕೂ ಹೆಚ್ಚು ಶವಗಳ ಅಂತ್ಯಸಂಸ್ಕಾರ

ಇತ್ತೀಚಿಗೆ ತಮ್ಮದೇ ಟ್ರಸ್ಟ್ ಮೂಲಕ‌ ಕೊರೊನಾ ಬಗ್ಗೆ ಹಲವು ಜಾಗೃತಿ ಮೂಡಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲು ಕುಟುಂಬಸ್ಥರೇ ಹಿಂದೇಟು ಹಾಕುವ ಪರಿಸ್ಥಿತಿ ಬಂದೊದಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಶಾ ಅವರೇ ಮುಂದೆ ಬಂದು ಯಾವುದೇ ಭಯವಿಲ್ಲದೇ ಪಿಪಿಇ ಕಿಟ್​ ಧರಿಸಿ ಶವಗಳಿಗೆ ಮುಕ್ತಿ ನೀಡುತ್ತಿದ್ದಾರೆ.

ಕಳೆದ ಒಂದು ವಾರದಿಂದ ಕೋವಿಡ್​​​ನಿಂದ ಮೃತಪಟ್ಟ ಸುಮಾರು 10ಕ್ಕೂ ಹೆಚ್ಚು ಶವಗಳನ್ನ ಅವರವರ ಧಾರ್ಮಿಕ ಸಂಪ್ರದಾಯದಂತೆಯೇ ಅಂತ್ಯಸಂಸ್ಕಾರ ಮಾಡಿ ಮುಗಿಸುತ್ತಿದ್ದಾರೆ.

ಇನ್ನು ಕೋವಿಡ್​​​​​ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿ, ಎಲ್ಲರೂ ಜಾಗೃತರಾಗಿರಿ, ಹೆದರಬೇಕಾದ ಅವಶ್ಯಕತೆ ಇಲ್ಲ. ಮೊದಲಿಗೆ ಎಲ್ಲರೂ ಮಾನವೀಯತೆ ರೂಡಿಸಿಕೊಳ್ಳಬೇಕು. ಜೀವನಕ್ಕಿಂತ ಜೀವ ಮುಖ್ಯ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆಯೂ ಮನವಿ ಮಾಡಿದ್ದಾರೆ.

ABOUT THE AUTHOR

...view details