ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಬರಡನಹಳ್ಳಿ ಬಳಿ ಏಳು ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.
ರಾಮನಗರದಲ್ಲಿ ಏಳು ಅಡಿ ಉದ್ದದ ಹೆಬ್ಬಾವು ಪತ್ತೆ - ಸುಂಡಘಟ್ಟ ಕೋಡಿಹಳ್ಳಿ
ರಾಮನಗರದ ಕನಕಪುರ ತಾಲೂಕಿನ ಬರಡನಹಳ್ಳಿ ಎಂಬಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು, ಅದನ್ನು ಸುಂಡಘಟ್ಟ ಕೋಡಿಹಳ್ಳಿ ವನ್ಯಜೀವಿ ವಿಭಾಗದ ಅರಣ್ಯಕ್ಕೆ ಬಿಟ್ಟಿದ್ದಾರೆ.
ಏಳು ಅಡಿ ಉದ್ದದ ಹೆಬ್ಬಾವು
ಹೆಬ್ಬಾವನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಬಳಿಕ ಹಾವು ರಕ್ಷಣೆಗಾಗಿ ನವೀನ್ ಎಂಬುವರು ಅರಣ್ಯ ಇಲಾಖೆ ನಿರ್ದೇಶನದಂತೆ ಆಗಮಿಸಿದ್ದಾರೆ. ಅವರು ಹಾವನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ನಂತರ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ಸುಂಡಘಟ್ಟ ಕೋಡಿಹಳ್ಳಿ ವನ್ಯಜೀವಿ ವಿಭಾಗದ ಅರಣ್ಯಕ್ಕೆ ಬಿಟ್ಟಿದ್ದಾರೆ.