ಕರ್ನಾಟಕ

karnataka

ETV Bharat / state

ಬರಡು ಜಾಗದಲ್ಲಿ ಹಸಿರುಕ್ರಾಂತಿ: ಗ್ರಾಮಕ್ಕೀಗ 6ನೇ ತರಗತಿ ಕಲಿತ ವ್ಯಕ್ತಿಯೇ ಮಾದರಿ - ಹಸಿರು ಜಾಗ

ಕೇವಲ 6ನೇ ತರಗತಿ ಓದಿರುವ ರಘು ಅವರ ಪರಿಸರ ಪ್ರೇಮ ಯಾವ ಪದವೀಧರರಿಗೂ ಕಡಿಮೆ ಇಲ್ಲದ್ದಾಗಿದೆ. ಅವರ ಕಾಳಜಿಯಿಂದ ಗುಂಡು ತೋಪು ಹಸಿರು ಹೊದ್ದು ನಿಂತಿದೆ. ಎಷ್ಟೋ ದಿನ ಆತ ರಾತ್ರಿ 12ರ ವರೆಗೂ ತೋಪಿನಲ್ಲಿ ಉಳಿದು ಕೆಲಸ ಮಾಡಿದ್ದನ್ನು ಗ್ರಾಮಸ್ಥರು ನೆನೆಯುತ್ತಾರೆ.

a-man-did-forestation-in-dry-land-at-ramngar-village
ಬರಡು ಜಾಗದಲ್ಲಿ ಹಸಿರುಕ್ರಾಂತಿ

By

Published : Feb 12, 2021, 7:38 PM IST

ರಾಮನಗರ:ಹಸಿರು ಮಾಯವಾಗುತ್ತಿದ್ದ ಬರಡು ಜಾಗದಲ್ಲಿ ವ್ಯಕ್ತಿಯೊಬ್ಬನ ಪರಿಶ್ರಮದಿಂದ ಸುತ್ತಲಿನ ಜಾಗವೀಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದ ರಘು ಇಂತಹ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದು, ಗ್ರಾಮದ ಜನರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಸರ್ಕಾರಿ ನಡುತೋಪಿನಲ್ಲಿದ್ದ ಬೃಹತ್ ಮರಗಳು ನೆಲಕ್ಕಚ್ಚಿದ್ದವು. ಈ ಹಿನ್ನೆಲೆ ಖಾಲಿಯಾಗಿದ್ದ ಜಾಗದಲ್ಲಿ ಮತ್ತೆ ಗಿಡಗಳ ನೆಟ್ಟು ಪೋಷಿಸಿದ್ದಾರೆ. ಇವರ ಪರಿಶ್ರಮದಿಂದಾಗಿ ನಡುತೋಪು ಹಸಿರಿನಿಂದ ಕಂಗೊಳಿಸುತ್ತಿದೆ.

ಬರಡು ಜಾಗದಲ್ಲಿ ಹಸಿರುಕ್ರಾಂತಿ

ರಾಂಪುರದ ಗುಂಡು ತೋಪು ಪುರಾತನವಾದುದು. ಇಲ್ಲಿ ನೂರಾರು ವರ್ಷದ 180ಕ್ಕೂ ಹೆಚ್ಚಿನ ಮರಗಳಿವೆ. ಅವುಗಳಲ್ಲಿ ಬಹುತೇಕ ವೃಕ್ಷಗಳು ನೆಲಕಚ್ಚಿವೆ. ಇನ್ನು 20 ಮರಗಳಷ್ಟೇ ಉಳಿದುಕೊಂಡಿದೆ. ಹೀಗಾಗಿ ಪಾಳು ಬಿದ್ದ ಜಾಗದಲ್ಲಿ ರಘು ಸಸಿಗಳನ್ನು ನೆಟ್ಟು ಗ್ರಾಮಸ್ಥರ ಸಹಕಾರದಿಂದ ಅವುಗಳನ್ನು ಪೋಷಿಸುತ್ತಾ ಬಂದಿದ್ದಾರೆ.
ಈ ಜಾಗದಲ್ಲಿ ಒಟ್ಟು 1050 ಸಸಿಗಳನ್ನು ನೆಟ್ಟಿದ್ದು, ಇದರಲ್ಲಿ 810 ಸಸಿಗಳು ಮರವಾಗಿ ಬೆಳೆಯುತ್ತಿವೆ. ಜಾಗದಲ್ಲಿ ಒಟ್ಟು 1050 ಸಸಿಗಳನ್ನು ನೆಟ್ಟಿದ್ದು, ಇದರಲ್ಲಿ 810 ಸಸಿಗಳು ಮರವಾಗಿ ಬೆಳೆಯುತ್ತಿವೆ.

ಬೇವು, ಹೊಂಗೆ, ಮಾವು, ಆಲ, ನೇರಳೆ, ಹಿಪ್ಪೆ, ಗೋಣಿ, ಅರಳಿ ಹೀಗೆ ನಾನಾ ಜಾತಿಯ ಸಸಿಗಳು ವೃಕ್ಷವಾಗುವ ಹಂತದಲ್ಲಿವೆ. ಇಡೀ ಗುಂಡು ತೋಪು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ತಮ್ಮದೇ ಗಾಡಿಯಲ್ಲಿ ನೀರಿನ ಡ್ರಮ್‌ಗಳನ್ನು ಕಟ್ಟಿಕೊಂಡು ಈ ಸಸಿಗಳಿಗೆ ನೀರುಣಿಸಿ ಬೆಳೆಸಿದ್ದು, ಸಸಿಗಳ ಸುತ್ತ ಮುಳ್ಳಿನ ಬೇಲಿ ಕಟ್ಟಿ ದನಕರು ಮೇಯದಂತೆ ಎಚ್ಚರ ವಹಿಸಿದ್ದಾರೆ.

ಕೇವಲ 6ನೇ ತರಗತಿ ಓದಿರುವ ರಘು ಅವರ ಪರಿಸರ ಪ್ರೇಮ ಯಾವ ಪದವೀಧರರಿಗೂ ಕಡಿಮೆ ಇಲ್ಲದ್ದಾಗಿದೆ. ಅವರ ಕಾಳಜಿಯಿಂದ ಗುಂಡು ತೋಪು ಹಸಿರು ಹೊದ್ದು ನಿಂತಿದೆ. ಎಷ್ಟೋ ದಿನ ಆತ ರಾತ್ರಿ 12ರ ವರೆಗೂ ತೋಪಿನಲ್ಲಿ ಉಳಿದು ಕೆಲಸ ಮಾಡಿದ್ದನ್ನು ಗ್ರಾಮಸ್ಥರು ನೆನೆಯುತ್ತಾರೆ.

ಸದ್ಯ ಗ್ರಾಮಸ್ಥರೆಲ್ಲ ಸೇರಿ ತೋಪಿನಲ್ಲಿನ ಹಳೆಯ ಕೊಳವೆ ಬಾವಿಗೆ ಮೋಟಾರ್‌ ಅಳವಡಿಸಿದ್ದಾರೆ. ಇದರಿಂದ ಗಿಡಗಳಿಗೆ ನೀರು ಪೂರೈಕೆಗೆ ಅನುಕೂಲವಾಗಿದೆ. ರಘು ಸಸ್ಯ ಕೃಷಿ ಕೇವಲ ಗುಂಡು ತೋಪಿಗೆ ಸೀಮಿತವಾಗಿಲ್ಲ ಬದಲಿಗೆ ಸುತ್ತಲಿನ ಕೆರೆ, ರಸ್ತೆ ಬದಿ ಹಾಗೂ ಸರ್ಕಾರಿ ಜಾಗಗಳಲ್ಲೂ ಅವರು ನೆಟ್ಟ ಸಸಿಗಳು ಎತ್ತರಕ್ಕೆ ಬೆಳೆಯತೊಡಗಿವೆ.

ಇದನ್ನೂ ಓದಿ:ಅಳಿವಿನಂಚಿನಲ್ಲಿರುವ ಪಕ್ಷಿಗಳ ಉಳಿವಿಗಾಗಿ ಶ್ರಮಿಸುತ್ತಿರುವ ಪರಿಸರ ಪ್ರೇಮಿ

ABOUT THE AUTHOR

...view details