ರಾಮನಗರ:ಆಹಾರವನ್ನರಸಿ ಬಂದ ಚಿರತೆಯೊಂದು ಕಾಡು ಪ್ರಾಣಿಗಳ ಬೇಟೆಗಾಗಿ ಹಾಕಿದ್ದ ಉರುಳಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಘಟನೆ ಕೋಟೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿನಲ್ಲಿ ಬಿತ್ತು ಚಿರತೆ - A leopard caught latest news
ಕಾಡು ಹಂದಿ ಬೇಟೆಗಾಗಿ ಕರಿಗೌಡ ಮತ್ತು ವಾಸು ಎಂಬುವವರ ಜಮೀನಿನ ಮಧ್ಯ ಭಾಗದಲ್ಲಿ ಯಾರೋ ಉರುಳು ಹಾಕಿದ್ದಾರೆ. ಆದ್ರೆ, ಉರುಳಿನಲ್ಲಿ ಚಿರತೆಯೊಂದು ಸಿಕ್ಕಿ ಹಾಕಿಕೊಂಡಿದೆ.
ಕಾಡುಹಂದಿ ಬೇಟೆಗಾಗಿ ಹಾಕಿದ್ದ ಉರುಳಿನಲ್ಲಿ ಬಿತ್ತು ಚಿರತೆ
ಜಿಲ್ಲೆಯ ಕನಕಪುರ ತಾಲೂಕಿನ ಕೋಟೆಕೊಪ್ಪ ಗ್ರಾಮದಲ್ಲಿ ಕಾಡು ಹಂದಿ ಬೇಟೆಗಾಗಿ ಕರಿಗೌಡ ಮತ್ತು ವಾಸು ಎಂಬುವರ ಜಮೀನಿನ ಮಧ್ಯ ಭಾಗದಲ್ಲಿ ಯಾರೋ ಉರುಳು ಹಾಕಿದ್ದಾರೆ. ಆದರೆ, ಆಹಾರಕ್ಕಾಗಿ ಬಂದ ಚಿರತೆಯೊಂದು ಉರುಳಿಗೆ ಬಿದ್ದು ಸಿಕ್ಕಿಹಾಕಿಕೊಂಡಿದೆ. ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸದ್ಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.