ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಸರ್ಕಾರಿ ವೈದ್ಯನನ್ನೇ ಬಲಿ ಪಡೆದ ಕೊರೊನಾ! - ರಾಮನಗರದಲ್ಲಿ ಕೊರೊನಾಗೆ ವೈದ್ಯ ಸಾವು,

ರಾಮನಗರದಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ನಿನ್ನೆ ಸರ್ಕಾರಿ ವೈದ್ಯರೊಬ್ಬನ್ನು ಬಲಿ ಪಡೆದಿದೆ.

doctor died by corona, doctor died by corona in Ramanagar, Ramanagar corona death news, ಕೊರೊನಾಗೆ ವೈದ್ಯ ಸಾವು, ರಾಮನಗರದಲ್ಲಿ ಕೊರೊನಾಗೆ ವೈದ್ಯ ಸಾವು, ರಾಮನಗರ ಕೊರೊನಾ ಸಾವು ಸುದ್ದಿ,
ಸಾಂದರ್ಭಿಕ ಚಿತ್ರ

By

Published : Jul 23, 2020, 6:46 AM IST

ರಾಮನಗರ:ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ವೈದ್ಯರಲ್ಲಿಯೂ ಪಾಸಿಟಿವ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಸರ್ಕಾರಿ ವೈದ್ಯರನ್ನ ಬಲಿ ಪಡೆದಿದೆ.

ಕೊರೊನಾ ಸಾಂಕ್ರಾಮಿಕ ರೋಗ ಇದುವರೆಗೆ ಜಿಲ್ಲೆಯಲ್ಲಿ ಸುಮಾರು ಹನ್ನೊಂದು ಜನರನ್ನು ಬಲಿ ಪಡೆದಿದ್ದು, ಜೊತೆಗೆ 12ನೇಯವರಾಗಿ ಸರ್ಕಾರಿ ವೈದ್ಯರು ಸಹ ಮೃತಪಟ್ಟಿದ್ದಾರೆ.

ಮೃತ ವೈದ್ಯ ( 50 ವರ್ಷ ) ಮೂಲತಃ ಬೆಂಗಳೂರಿನವರು. ಇವರು ಕಳೆದ ಐದು ವರ್ಷಗಳಿಂದ ಕನಕಪುರ ತಾಲೂಕಿನ ಚಿಕ್ಕಮುದುವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಡಳಿತ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.

ಕಳೆದ ಒಂದು ತಿಂಗಳ ಹಿಂದೆಯಷ್ಟೆ ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಇಪ್ಪತ್ತು ದಿನಗಳಿಂದ ಕೋಮಾ ಸ್ಥಿತಿ ತಲುಪಿದ್ದ ಡಾಕ್ಟರ್​ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿಕಿತ್ಸೆ ಫಲಿಸದೇ ವೈದ್ಯ ಸಾವನ್ನಪ್ಪಿದ್ದಾರೆ.

ABOUT THE AUTHOR

...view details