ಕರ್ನಾಟಕ

karnataka

ETV Bharat / state

ರಾಮನಗರ ಜಿಲ್ಲೆಯಲ್ಲಿಂದು  82 ಜನರಿಗೆ ಕೊರೊನಾ ದೃಢ - Ramanagara corona latest news

ಜಿಲ್ಲೆಯಲ್ಲಿ ಇಂದು ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಂತಿದೆ.

DC Archana
DC Archana

By

Published : Oct 8, 2020, 5:47 PM IST

ರಾಮನಗರ: ಜಿಲ್ಲೆಯಲ್ಲಿ ಇಂದು ಹೊಸದಾಗಿ 82 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ತಾಲೂಕುವಾರು ಕೊರೊನಾ ವಿವರ:

ಚನ್ನಪಟ್ಟಣ 39, ಕನಕಪುರ 13, ಮಾಗಡಿ 8 ಮತ್ತು ರಾಮನಗರ 22 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,187 ಕ್ಕೆ ಏರಿಕೆಯಾಗಿದೆ.

ಮೃತರ ಮಾಹಿತಿ :

ಇಂದು ಕನಕಪುರ ತಾಲೂಕಿನಲ್ಲಿ ಒರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇದುವರೆಗೆ ಕೊರೊನಾದಿಂದ ಒಟ್ಟು 59 ಮಂದಿ ಮೃತಪಟ್ಟಿದ್ದಾರೆ.

ಗುಣಮುಖ :

ಇಂದು ಚನ್ನಪಟ್ಟಣ ತಾಲೂಕಿನಲ್ಲಿ 32, ಕನಕಪುರ ತಾಲೂಕಿನಲ್ಲಿ 52, ಮಾಗಡಿ ತಾಲೂಕಿನಲ್ಲಿ 26 ಹಾಗೂ ರಾಮನಗರ ತಾಲೂಕಿನಲ್ಲಿ 31 ಜನ ಸೇರಿ ಒಟ್ಟಾರೆ 141 ಜನರು ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 5403 ಜನರು ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳಿಷ್ಟು :

ಇನ್ನು ಜಿಲ್ಲೆಯಲ್ಲಿ ಸುಮಾರು 725 ಜನರು ವಿವಿಧ ಕೋವಿಡ್ ಆಸ್ಪತ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಚನ್ನಪಟ್ಟಣ 155, ಕನಕಪುರ 178, ಮಾಗಡಿ 123 ಮತ್ತು ರಾಮನಗರ 269 ಪ್ರಕರಣಗಳು ಸೇರಿವೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.

ABOUT THE AUTHOR

...view details