ಕರ್ನಾಟಕ

karnataka

ETV Bharat / state

ಮಾಗಡಿ ಬಳಿಯ ನೀರಸಾಗರ ಕೆರೆ ಏರಿ ಒಡೆದು 80 ಎಕರೆ ಬೆಳೆ ನಾಶ - ಬೆಳೆ ನಾಶ

ನೀರಸಾಗರ ಕೆರೆ ಏರಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಸುಮಾರು 80 ಎಕರೆ ಬೆಳೆ ನಾಶವಾಗಿರುವ ಘಟನೆ ನಡೆದಿದೆ.

ಏರಿ ಒಡೆದ ನೀರಸಾಗರ ಕೆರೆ

By

Published : Aug 21, 2019, 1:49 PM IST

ರಾಮನಗರ:ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮಾಗಡಿ ತಾಲೂಕಿನ ಕುದೂರು ಹೋಬಳಿಯ ನೀರಸಾಗರ ಕೆರೆ ಏರಿ ಒಡೆದು ರೈತರ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಸುಮಾರು 80 ಎಕರೆ ಬೆಳೆ ನಾಶವಾಗಿರುವ ಘಟನೆ ನಡೆದಿದೆ.

ನೀರು ನುಗ್ಗಿದ ಪರಿಣಾಮ ರೈತರ ಬೆಳೆ ಸಂಪೂರ್ಣ ನಾಶವಾಗಿದ್ದು, ರಾಗಿ, ಭತ್ತ, ಜೋಳ ಸೇರಿದಂತೆ ತರಕಾರಿ ಬೆಳೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ.

ಏರಿ ಒಡೆದ ನೀರಸಾಗರ ಕೆರೆ

ಸುಮಾರು 25 ಎಕರೆಯಲ್ಲಿ ರಾಗಿ ಬಿತ್ತನೆ ಮಾಡಿದ್ದ ಜಮೀನು ಸಂಪೂರ್ಣ ಜಲಾವೃತವಾಗಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ‌ ದೂಡಿದೆ.

ಈಗಾಗಲೇ ಹತ್ತಾರು ರೈತರ ಜಮೀನು ಜಲಾವೃತವಾಗಿದ್ದು, ಕೆರೆಯ ನೀರು ಮುಂದೆ ಹರಿದು ಪಕ್ಕದ ಗ್ರಾಮ ಶ್ರೀಗಿರಿಪುರದ ಕೆರೆಗೂ ಸೇರಲಿರುವ ಕಾರಣ ಅಲ್ಲಿನ ರೈತರೂ ಕೂಡ ಆತಂಕಕ್ಕೆ ಒಳಗಾಗಿದ್ದಾರೆ.

ABOUT THE AUTHOR

...view details