ರಾಮನಗರ: ತಾಲೂಕಿನ ಬಸವನಪುರ-ವಡೇರಹಳ್ಳಿ ಬಳಿ ರೈಲಿಗೆ ಸಿಲುಕಿ 6 ತಿಂಗಳ ಗಂಡು ಚಿರತೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ಆಹಾರ ಅರಸಿ ಬಂದ ಚಿರತೆ ಬಸವನಪುರ-ವಡೇರಹಳ್ಳಿ ಬಳಿ ಇರುವ ರೈಲು ಹಳಿ ದಾಟುವ ವೇಳೆ ಚಲಿಸುತ್ತಿದ್ದ ರೈಲಿನಡಿ ಸಿಲುಕಿ ಸಾವನ್ನಪ್ಪಿದೆ ಎನ್ನಲಾಗಿದೆ. ವಿಷಯ ತಿಳಿದು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು.