ರಾಮನಗರ:ಹಾಡಹಗಲೇ ಕಾರಿನ ಗಾಜು ಒಡೆದು ಅದರಲ್ಲಿದ್ದ 3 ಲಕ್ಷ ರೂ ಹಣ ಕಳವು ಮಾಡಿರುವ ಕಳ್ಳರು ಪರಾರಿಯಾಗಿರುವ ಘಟನೆ ಚನ್ನಪಟ್ಟಣ ಟೌನ್ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.
ಹಾಡಹಗಲೇ ಕಾರಿನ ಗಾಜು ಒಡೆದು 3 ಲಕ್ಷ ರೂ ಹಣ ಕಳವು - ರಾಮನಗರ ಕ್ರೈಂ ನ್ಯೂಸ್
ಕಾರಿನ ಗಾಜು ಒಡೆದು ಬ್ಯಾಗ್‌ನಲ್ಲಿದ್ದ 3 ಲಕ್ಷ ರೂ ಹಣ ಕಳವು ಮಾಡಿರುವ ಘಟನೆ ಚನ್ನಪಟ್ಟಣ ಟೌನ್ ವಿವೇಕಾನಂದ ಬಡಾವಣೆಯಲ್ಲಿ ನಡೆದಿದೆ.
ಕಾರಿನ ಗಾಜು ಒಡೆದು 3 ಲಕ್ಷ ಹಣ ಕಳ್ಳತನ
ಚನ್ನಪಟ್ಟಣ ನಿವಾಸಿ ಬಸವರಾಜ್ ಅರಸ್ ತಮ್ಮ ಮನೆ ಮುಂದೆ ಕಾರು ನಿಲ್ಲಿಸಿ ಮನೆಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಎರಡು ಬೈಕ್‌ನಲ್ಲಿ ಬಂದ ಕಳ್ಳರು 3 ಲಕ್ಷ ಹಣ ದೋಚಿದ್ದಾರೆ. ಬಸವರಾಜ್ ಅರಸ್ ಮನೆಯಲ್ಲಿ ಮದುವೆ ಕಾರ್ಯನಿಮಿತ್ತ ಸ್ನೇಹಿತರಿಂದ ಹಣ ಕೇಳಿ ಪಡೆದಿದ್ದರಂತೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಕ್ಕಪಕ್ಕದಲ್ಲಿರುವ ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಿ ತನಿಖೆ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.