ರಾಮನಗರ:ಜಿಲ್ಲೆಯಲ್ಲಿ ಚನ್ನಪಟ್ಟಣ 4, ಕನಕಪುರ 5, ಮಾಗಡಿ 3 ಮತ್ತು ರಾಮನಗರ 6 ಪ್ರಕರಣಗಳು ಸೇರಿ ಇಂದು ಕೇವಲ 18 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಸೋಂಕಿತರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ...
ಜಿಲ್ಲೆಯಲ್ಲಿ ಈವರೆಗೆ 6,974 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 1642, ಕನಕಪುರ 1567, ಮಾಗಡಿ 1153 ಮತ್ತು ರಾಮನಗರ 2612 ಪ್ರಕರಣಗಳು ಸೇರಿವೆ.
ಜಿಲ್ಲೆಯಲ್ಲಿ ಒಟ್ಟು ಸಾವು...
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 66 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ಧಾರೆ. ಚನ್ನಪಟ್ಟಣ ತಾಲ್ಲೂಕಿನಲ್ಲಿ 18, ಕನಕಪುರ ತಾಲ್ಲೂಕಿನಲ್ಲಿ 14, ಮಾಗಡಿ ತಾಲ್ಲೂಕಿನಲ್ಲಿ 18 ಜನ ಹಾಗೂ ರಾಮನಗರ ತಾಲ್ಲೂಕಿನಲ್ಲಿ 16 ಜನ ಸಾವನ್ನಪ್ಪಿದ್ದಾರೆ.
ಒಟ್ಟು ಗುಣಮುಖ...
ಇಂದು ಚನ್ನಪಟ್ಟಣ ತಾಲ್ಲೂಕಿನಲ್ಲಿ 4, ಕನಕಪುರ ತಾಲ್ಲೂಕಿನಲ್ಲಿ 5, ಮಾಗಡಿ ತಾಲ್ಲೂಕಿನಲ್ಲಿ 7 ಹಾಗೂ ರಾಮನಗರ ತಾಲ್ಲೂಕಿನಲ್ಲಿ 7 ಜನ ಸೇರಿ ಒಟ್ಟಾರೆ 23 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,508 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ. ಈ ಪೈಕಿ ಚನ್ನಪಟ್ಟಣ 1543, ಕನಕಪುರ 1442, ಮಾಗಡಿ 1065 ಮತ್ತು ರಾಮನಗರ 2458 ಜನರು ಡಿಸ್ಚಾರ್ಜ್ ಆಗಿದ್ದಾರೆ.
ಸಕ್ರಿಯ ಪ್ರಕರಣ...
ಜಿಲ್ಲೆಯಲ್ಲಿ ದಾಖಲಾಗಿರುವ 6,974 ಪ್ರಕರಣಗಳ ಪೈಕಿ 6,508 ಜನರು ಗುಣಮುಖರಾಗಿದ್ದಾರೆ. 400 ಜನರು ವಿವಿಧ ಕೋವಿಡ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಒಟ್ಟು 400 ಸಕ್ರಿಯ ಪ್ರಕರಣಗಳ ಪೈಕಿ ಚನ್ನಪಟ್ಟಣ 81, ಕನಕಪುರ 111, ಮಾಗಡಿ 70 ಮತ್ತು ರಾಮನಗರ 138 ಪ್ರಕರಣಗಳು ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.