ಕರ್ನಾಟಕ

karnataka

ETV Bharat / state

ರಾಮ​ನಗರದಲ್ಲಿ ಲಾಕ್​ಡೌನ್​ ಉಲ್ಲಂಘಿಸಿದ 15 ಮಂದಿ ಮೇಲೆ ಪ್ರಕರಣ ದಾಖಲು

ಲಾಕ್​ಡೌನ್ ಮುಂದುವರಿದಿದ್ದು ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ. ನಿಯಮ ಮೀರಿದರೆ ವಾಹನಗಳನ್ನ ಜಪ್ತಿ‌ ಮಾಡಲಾಗುತ್ತದೆ ಎಂದು ಎಸ್ಪಿ ಡಾ. ಅನೂಪ್ ಎ. ಶೆಟ್ಟಿ ಎಚ್ಚರಿಸಿದ್ದಾರೆ.

ಲಾಕ್​ಡೌನ್​ ಉಲ್ಲಂಘಿಸಿದ 15 ಮಂದಿ ಮೇಲೆ ಪ್ರಕರಣ ದಾಖಲು
ಲಾಕ್​ಡೌನ್​ ಉಲ್ಲಂಘಿಸಿದ 15 ಮಂದಿ ಮೇಲೆ ಪ್ರಕರಣ ದಾಖಲು

By

Published : Apr 12, 2020, 3:08 PM IST

ರಾಮನಗರ :ಲಾಕ್‌ಡೌನ್ ನಿಯಮ ಉಲ್ಲಂಘಿಸಿದ 15 ಮಂದಿ ವಿರುದ್ಧ ಒಂದೇ ದಿನ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದಲ್ಲಿ ಲಾಕ್ ಡೌನ್ ಮುಂದುವರಿದಿರುವ ಹಿನ್ನೆಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಲಾಕ್ ಡೌನ್ ಮುಂದುವರಿದ ಹಿನ್ನೆಲೆ ಪೋಲೀಸರು ಸಾರ್ವಜನಿಕರ ಸಂಚಾರ ಮತ್ತಷ್ಟು ಬಿಗಿಗೊಳಿಸಿದ್ದು ದಿನಾಂಕ 11.4.20 ರಂದು ಒಂದೇ ದಿನ ರಾಮನಗರ ಜಿಲ್ಲೆಯಾದ್ಯಂತ ಸರ್ಕಾರಿ ಆದೇಶದ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 15 ಜನರ ಮೇಲೆ 14 ಪ್ರಕರಣಗಳು ದಾಖಲಾಗಿದೆ.

ಹಾರೋಹಳ್ಳಿಯಲ್ಲಿ 1 ಕಗ್ಗಲಿಪುರ 4, ಮಾಗಡಿ 3 , ಚನ್ನಪಟ್ಟಣ ನಗರ 1, ಚನ್ನಪಟ್ಟಣ ಗ್ರಾಮಾಂತರ 2, ಎಂ.ಕೆ.ದೊಡ್ಡಿ(ಚನ್ನಪಟ್ಟಣ) 1, ಕೋಡಿಹಳ್ಳಿ (ಕನಕಪುರ)2 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಎ. ಶೆಟ್ಟಿ ಮಾಹಿತಿ ನೀಡಿದ್ದಾರೆ.

ಅಲ್ಲದೆ ಲಾಕ್​ಡೌನ್ ಮುಂದುವರಿದಿದ್ದು ಸಾರ್ವಜನಿಕರು ಯಾವುದೇ ಕಾರಣಕ್ಕೂ ಅನವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿದ್ದು ಅನವಶ್ಯಕವಾಗಿ ಯಾವುದೇ ವಾಹನ‌ ತಿರುಗಾಡಿದರೆ ಅಂತಹ ವಾಹನಗಳನ್ನ ಜಪ್ತಿ‌ಮಾಡಲಾಗುತ್ತದೆ ಎಂದು ಎಸ್ಪಿ ಡಾ. ಅನೂಪ್ ಎ. ಶೆಟ್ಟಿ ಎಚ್ಚರಿಸಿದ್ದಾರೆ.

ABOUT THE AUTHOR

...view details