ರಾಮನಗರ: ಜಿಲ್ಲೆಯ ಚನ್ನಪಟ್ಟಣದಲ್ಲಿ 34, ಕನಕಪುರ-17, ಮಾಗಡಿ-32 ಮತ್ತು ರಾಮನಗರದಲ್ಲಿ 63 ಪ್ರಕರಣಗಳು ಸೇರಿದಂತೆ ಒಟ್ಟು 146 ಕೋವಿಡ್ ಪಾಸಿಟಿವ್ ಪ್ರಕರಣಗಳು ನಿನ್ನೆ ವರದಿಯಾಗಿದೆ. ಸೋಂಕು ದೃಢಪಟ್ಟವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ತಿಳಿಸಿದ್ದಾರೆ.
ಒಟ್ಟು ಸೋಂಕು ಪ್ರಕರಣ: ಈವರೆಗೆ ಜಿಲ್ಲೆಯಲ್ಲಿ 4,622 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಚನ್ನಪಟ್ಟಣ 1094, ಕನಕಪುರ 942, ಮಾಗಡಿ 720 ಮತ್ತು ರಾಮನಗರದಲ್ಲಿ 1866 ಪ್ರಕರಣಗಳು ವರದಿಯಾಗಿದೆ.
ಮೃತಪಟ್ಟವರ ಪ್ರಕರಣ: ಚನ್ನಪಟ್ಟಣ ತಾಲೂಕು- 12, ಕನಕಪುರ ತಾಲೂಕು- 11, ಮಾಗಡಿ ತಾಲೂಕು- 14 ಹಾಗೂ ರಾಮನಗರ ತಾಲೂಕಿನಲ್ಲಿ 15 ಮಂದಿ ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ 52 ಮಂದಿ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ.
ಗುಣಮುಖ:ಚನ್ನಪಟ್ಟಣ ತಾಲೂಕು-16, ಕನಕಪುರ-19, ಮಾಗಡಿ- 23 ಹಾಗೂ ರಾಮನಗರ ತಾಲೂಕಿನಲ್ಲಿ 38 ಮಂದಿ ಸೇರಿದಂತೆ ಒಟ್ಟಾರೆ 96 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 3,706 ಜನರು ಗುಣಮುಖರಾಗಿದ್ದಾರೆ. ಈ ಪೈಕಿ ಚನ್ನಪಟ್ಟಣ 886, ಕನಕಪುರ 753, ಮಾಗಡಿ 490 ಮತ್ತು ರಾಮನಗರ 1577 ಜನರು ಸೇರಿದ್ದಾರೆ.
ಸಕ್ರಿಯ ಪ್ರಕರಣ:ಜಿಲ್ಲೆಯಲ್ಲಿ ದಾಖಲಾಗಿರುವ 4,622 ಪ್ರಕರಣಗಳ ಪೈಕಿ 3,706 ಜನರು ಗುಣಮುಖರಾಗಿದ್ದು, ಸದ್ಯ 864 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ ಚನ್ನಪಟ್ಟಣ 196, ಕನಕಪುರ 178, ಮಾಗಡಿ 216 ಮತ್ತು ರಾಮನಗರ 274 ಪ್ರಕರಣಗಳು ಸೇರಿವೆ.