ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ಏರಿಕೆಯಾಗ್ತಿದೆ ಸೋಂಕಿತರ ಸಂಖ್ಯೆ: ಇಂದು 12 ಮಂದಿಗೆ ಕೊರೊನಾ ದೃಢ - ರಾಮನಗರ

ರಾಮನಗರ ಜಿಲ್ಲೆಯಲ್ಲಿ ಇಂದು 12 ಮಂದಿಗೆ ಕೊರೊನಾ ಪಾಸಿಟಿವ್​ ವರದಿ ಬಂದಿದೆ. ಬಿಡದಿಯಲ್ಲಿ 2 ಹಾಗೂ ಚನ್ನಪಟ್ಟಣದಲ್ಲಿ 10 ಮಂದಿಗೆ ಪಾಸಿಟಿವ್ ದೃಢವಾಗಿದೆ.

Ramnagar
ರಾಮನಗರ

By

Published : Jun 17, 2020, 5:33 PM IST

Updated : Jun 17, 2020, 5:39 PM IST

ರಾಮನಗರ: ಒಂದೇ ದಿನ 12 ಮಂದಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ರಾಮನಗರದ ಬಿಡದಿಯಲ್ಲಿ 2 ಹಾಗೂ ಚನ್ನಪಟ್ಟಣದಲ್ಲಿ 10 ಮಂದಿಗೆ ಪಾಸಿಟಿವ್ ದೃಢವಾಗಿದೆ.

ಬಿಡದಿಯ ಟೊಯೋಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರಿಗೆ ಕೊರೋನಾ ಪಾಸಿಟಿವ್​ ಬಂದಿದ್ದು, ಮಂಡ್ಯದ ಓರ್ವ ಹಾಗೂ ಬೆಂಗಳೂರಿನ ಆಡುಗೋಡಿಯ ವ್ಯಕ್ತಿಯೋರ್ವನಿಗೆ ಕೊರೊನಾ ಪಾಸಿಟಿವ್​ ವರದಿ ಬಂದಿದೆ.

ಕೊರೊನಾ ಸೋಂಕಿತರ ಟ್ರಾವೆಲ್​ ಹಿಸ್ಟರಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಚನ್ನಪಟ್ಟಣದಲ್ಲಿ 10 ಮಂದಿಗೆ ಕೊರೋನಾ ಪಾಸಿಟಿವ್​ ಬಂದಿದ್ದು, ಅದರಲ್ಲಿ ತಾಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದ 7 ಮಂದಿ ಹಾಗೂ ದೇವರಹೊಸಹಳ್ಳಿ ಗ್ರಾಮದ 3 ಮಂದಿಗೆ ಕೊರೊನಾ ದೃಢವಾಗಿದೆ. P-4337 ಸಂಪರ್ಕದಲ್ಲಿದ್ದ 7 ಮಂದಿಗೆ ಸೋಂಕು ದೃಢವಾಗಿದ್ದು, P-4337 ಸಂಪರ್ಕದಲ್ಲಿದ್ದ 24 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು.

ಈಗ ಕ್ವಾರಂಟೈನ್​ನಲ್ಲಿದ್ದ 7 ಮಂದಿಗೆ ಪಾಸಿಟಿವ್ ಬಂದಿದ್ದು, ದೇವರಹೊಸಹಳ್ಳಿಯ P- 6856 ರ ತಾಯಿ ಹಾಗೂ ಇಬ್ಬರು ಸಹೋದರರಿಗೆ ಪಾಸಿಟಿವ್​ ಬಂದಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದಿನ ವರದಿ ಸೇರಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 37 ಕ್ಕೆ ಏರಿಕೆಯಾಗಿದೆ.

Last Updated : Jun 17, 2020, 5:39 PM IST

ABOUT THE AUTHOR

...view details