ಕರ್ನಾಟಕ

karnataka

ETV Bharat / state

ಮನೆಯಲ್ಲಿ ಗುಂಡಿ ತೋಡಿ ವಾಮಾಚಾರ ಆರೋಪ.. ಕನಕಪುರದಲ್ಲಿ 12 ಮಂದಿ ಅರೆಸ್ಟ್​, ಹೆಣ್ಣು ಮಗು ರಕ್ಷಣೆ - sorcery case

ವಾಮಾಚಾರ ನಡೆಸುತ್ತಿದ್ದ ಆರೋಪದ ಮೇಲೆ 12 ಮಂದಿಯನ್ನು ಸಾತನೂರು ಪೊಲೀಸರು ಬಂಧಿಸಿದ್ದಾರೆ. ವಾಮಾಚಾರ ನಡೆಸುತ್ತಿದ್ದ ಸ್ಥಳದಲ್ಲಿದ್ದ ಮಗುವನ್ನು ಕರೆತಂದಿದ್ದಾರೆ.

ramanagara sorcery case
ರಾಮನಗರ ವಾಮಾಚಾರ ಪ್ರಕರಣ

By

Published : Nov 10, 2021, 10:28 AM IST

Updated : Nov 10, 2021, 2:23 PM IST

ರಾಮನಗರ: ನಿಧಿ ಆಸೆಗೆ ಮನೆಯೊಂದರಲ್ಲಿ ಗುಂಡಿ ತೋಡಿ ವಾಮಾಚಾರ ನಡೆಸುತ್ತಿದ್ದ ಆರೋಪದ ಮೇಲೆ 12 ಮಂದಿಯನ್ನು ಸಾತನೂರು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಸಮೀಪದ ಭೂಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ರಾಮನಗರ ವಾಮಾಚಾರ ಪ್ರಕರಣ

ಪೂಜಾರಿ, ಮಾಲೀಕ ಸೇರಿದಂತೆ 13 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪೈಕಿ 4 ವರ್ಷದ ಮಗುವನ್ನು ಸಹ ಕರೆತಂದಿದ್ದಾರೆ. ನಿಧಿ ಆಸೆಗೆ ಅನೇಕ ವರ್ಷಗಳಿಂದ ವಾಮಾಚಾರ ನಡೆಸುತ್ತಿದ್ದರು ಎನ್ನುವ ಆರೋಪದಡಿ ಸಾತನೂರು ಪೊಲೀಸರು 12 ಮಂದಿಯನ್ನು ಬಂಧಿಸಿದ್ದಾರೆ.

ಘಟನೆ:

ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಭೂಹಳ್ಳಿ ಗ್ರಾಮದಲ್ಲಿನ ಮನೆಯೊಂದರಲ್ಲಿ ಕಳೆದ ಅನೇಕ ವರ್ಷಗಳಿಂದಲೂ ವಾಮಾಚಾರ ನಡೆಯುತ್ತಿತ್ತು. ನಿಧಿ ಶೋಧಗಾಗಿ ಈ ಕಾರ್ಯ ನಡೆಸಲಾಗುತ್ತಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಇದೀಗ ಎರಡು ಕಾರುಗಳಲ್ಲಿ ಇಲ್ಲಿಗೆ ಬಂದಿದ್ದವರ ಬಗ್ಗೆ ಖಚಿತ ಮಾಹಿತಿ ಪಡೆದು ಬೆನ್ನತ್ತಿದ್ದ ಪೊಲೀಸರು ದಾಳಿ ನಡೆಸಿ, ರೆಡ್ ಹ್ಯಾಂಡ್ ಆಗಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

12 ಮಂದಿ ವಶಕ್ಕೆ:

ಬಂಧಿತರಲ್ಲಿ 8 ಮಂದಿ ಹೊರ ಜಿಲ್ಲೆಯವರು ಎನ್ನಲಾಗ್ತಿದೆ. 12 ಮಂದಿ ಹೊರತಾಗಿ 4 ವರ್ಷದ ಹೆಣ್ಣು ಮಗು ಕೂಡ ಇದೆ. ಈ ಗ್ರಾಮದಲ್ಲಿ ಮನೆ ಬಾಡಿಗೆಗೆ ನೀಡಿದ್ದ ಮಾಲೀಕ, ಆತನ ಪತ್ನಿ, ಇಬ್ಬರು ಮಕ್ಕಳು, ಮಾಲೀಕನ ಪತ್ನಿಯ ತಮ್ಮ, ಇಲ್ಲಿಗೆ ಬಂದಿದ್ದವರು ಸೇರಿ ಒಟ್ಟು 12 ಮಂದಿಯನ್ನು ಪೊಲೀಸರು ಸದ್ಯ ಕಂಬಿ ಹಿಂದೆ ತಳ್ಳಿದ್ದಾರೆ.

ಮಗುವನ್ನು ಬಲಿ ನೀಡುವುದಕ್ಕೆ ಕರೆತರಲಾಗಿತ್ತೆ?

4 ವರ್ಷದ ಮಗು ಯಾರಿಗೆ ಸೇರಿದ್ದು ಎಂಬುದು ತಿಳಿಯುವುದೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಮಗುವನ್ನು ಬಲಿ ಕೊಡಲು ಕರೆತರಲಾಗಿತ್ತೆ ಎಂಬುದರ ಬಗ್ಗೆ ಪೊಲೀಸರು ಶಂಕಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಮನೆಯಲ್ಲಿ ಗುಂಡಿಗಳು:

ಇದಲ್ಲದೇ ದಾಳಿ ನಡೆಸಿದ ವೇಳೆ ಇಡೀ ಮನೆಯಲ್ಲಿ ಗುಂಡಿಗಳು ಪತ್ತೆಯಾಗಿವೆ. ಪ್ರತಿ ಬಾರಿಯೂ ವಾಮಾಚಾರ ನಡೆಸಿ, ಬೆಳಗಾಗುವಷ್ಟರಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ದರು ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಬೈಕಿಗೆ ಆಟೋ ಡಿಕ್ಕಿ ಸ್ಥಳದಲ್ಲೇ ಅಜ್ಜ - ಮೊಮ್ಮಗಳು ಸಾವು

Last Updated : Nov 10, 2021, 2:23 PM IST

ABOUT THE AUTHOR

...view details