ರಾಮನಗರ: ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ಇಂದು ಗುಣಮುಖರಾಗಿದ್ದಾರೆ.
ರಾಮನಗರದಲ್ಲಿಂದು 11 ಜನ ಕೋವಿಡ್ನಿಂದ ಗುಣಮುಖ - Ramanagara news
ಜಿಲ್ಲೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ 11 ಮಂದಿ ಇಂದು ಗುಣಮುಖರಾಗಿದ್ದು, ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.
ರಾಮನಗರ
11 ಜನರು ಕೊರೊನಾದಿಂದ ಮುಕ್ತಿ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಪೈಕಿ ರಾಮನಗರ - 4, ಚನ್ನಪಟ್ಟಣ - 7 ಜನರು ಬಿಡುಗಡೆಗೊಂಡಿದ್ದಾರೆ.
ರಾಮನಗರದ ಕಂದಾಯ ಭವನದಲ್ಲಿರುವ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದ ಅವರನ್ನ ಡಿಸಿ ಎಂ.ಎಸ್.ಅರ್ಚನಾ, ಎಸ್ಪಿ ಅನೂಪ್ ಎ ಶೆಟ್ಟಿ, DHO ಡಾ.ನಿರಂಜನ್ ಸಮ್ಮುಖದಲ್ಲಿ ಪುಷ್ಪವೃಷ್ಟಿಯೊಂದಿಗೆ ಬೀಳ್ಕೊಡಲಾಯಿತು. ತಮ್ಮ ತಮ್ಮ ಮನೆಗಳಿಗೆ ಹೊರಟ ಗುಣಮುಖರು ಮೊಗದಲ್ಲಿ ಮಂದಹಾಸ ಮನೆ ಮಾಡಿತ್ತು.